ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್, ಮ್ಯಾನ್ಮಾರ್ನಲ್ಲಿ ತೀವ್ರ ಭೂಕಂಪ ಸಂಭವಿಸಿದ ಬೆನ್ನಲ್ಲೇ ಇದೀಗ ತೀರ ಪ್ರದೇಶಕ್ಕೆ ಸುನಾಮಿ ಭೀತಿ ಎದುರಾಗಿದೆ. ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ರಕ್ಕಸ ಅಲೆಗಳು, ಸಮುದ್ರ ನೀರು ಸುನಾಮಿಯಾಗಿ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಈ ಸುನಾಮಿ ಎಚ್ಚರಿಕೆ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ತೀರ ಪ್ರದೇಶಗಳ ಜನರು ಅಲರ್ಟ್ ಆಗಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಸಂಭವನೀಯ ಹಾನಿ ಮತ್ತು ಆಫ್ಟರ್ಶಾಕ್ಗಳನ್ನು ನಿರ್ಣಯಿಸುತ್ತಿದ್ದಾರೆ. ತುರ್ತು ಪ್ರತಿಕ್ರಿಯೆ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ, ಜನರು ಎಚ್ಚರವಾಗಿರಲು ಮತ್ತು ಅಧಿಕೃತ ಸಲಹೆಗಳನ್ನು ಪಾಲಿಸಲು ಒತ್ತಾಯಿಸಲಾಗಿದೆ.
ಟೋಂಗಾ ಬಳಿ 7.1 ತೀವ್ರತೆಯ ಬಲವಾದ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಹಲವು ತೀರ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.