ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನೆದರ್ಲ್ಯಾಂಡ್ಸ್ ವಿದೇಶಾಂಗ ಸಚಿವ ಕ್ಯಾಸ್ಪರ್ ವೆಲ್ಡ್ಕ್ಯಾಂಪ್ ಭಾರತಕ್ಕೆ ಆಗಮನ, ಅವರನ್ನು ಆತ್ಮೀಯವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ವಾಗತಿಸಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ ಅವರು, “ನೆದರ್ಲ್ಯಾಂಡ್ಸ್ನ ಎಫ್ಎಂ ಕ್ಯಾಸ್ಪರ್ ವೆಲ್ಡ್ಕ್ಯಾಂಪ್ ಅವರಿಗೆ ಭಾರತಕ್ಕೆ ಸ್ವಾಗತ. ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡುವುದಾಗಿ ವೆಲ್ಡ್ಕ್ಯಾಂಪ್ ತಿಳಿಸಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.