January 30, 2026
Friday, January 30, 2026
spot_img

CINE | ‘ವಾರಾಣಸಿ’ ರಿಲೀಸ್ ಡೇಟ್ ವೈರಲ್: ಅಧಿಕೃತ ಅನೌನ್ಸ್ ಬಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಸಂಯೋಜನೆಯ ಬಹುನಿರೀಕ್ಷಿತ ಸಿನಿಮಾ ‘ವಾರಾಣಸಿ’ ರಿಲೀಸ್ ಡೇಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನೂ ಅಧಿಕೃತ ಅನೌನ್ಸ್ ಆಗಿಲ್ಲದಿದ್ದರೂ, ಚಿತ್ರದ ಬಿಡುಗಡೆಯ ದಿನಾಂಕ ವಾರಾಣಸಿಯಲ್ಲಿಯೇ ಬಹಿರಂಗಗೊಂಡಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

ವಾರಾಣಸಿ ನಗರದ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಹಾಕಲಾಗಿರುವ ಹೋಲ್ಡಿಂಗ್ಸ್‌ಗಳಲ್ಲಿ ಚಿತ್ರದ ರಿಲೀಸ್ ಡೇಟ್ ಉಲ್ಲೇಖಗೊಂಡಿದ್ದು, ಇದರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಈ ಮಾಹಿತಿಯ ಪ್ರಕಾರ, ‘ವಾರಾಣಸಿ’ ಚಿತ್ರ 2027ರ ಏಪ್ರಿಲ್ 7ರಂದು ತೆರೆಕಾಣಲಿದೆ ಎನ್ನಲಾಗುತ್ತಿದೆ. ಈ ವಿಷಯವನ್ನು ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಕೂಡ ಪರೋಕ್ಷವಾಗಿ ಉಲ್ಲೇಖಿಸಿರುವುದು ಚರ್ಚೆಗೆ ಇನ್ನಷ್ಟು ಬಲ ನೀಡಿದೆ.

ಇದನ್ನೂ ಓದಿ:

ಈ ಡೇಟ್ ವಿಶೇಷವಾಗಿರುವುದಕ್ಕೂ ಕಾರಣಗಳಿವೆ. ಏಪ್ರಿಲ್ 7ರ ಸುಮಾರಿಗೆ ಯುಗಾದಿ, ಗುಡಿ ಪಡ್ವಾ ಹಬ್ಬಗಳು ಬರುತ್ತಿದ್ದು, ನಂತರ ಅಂಬೇಡ್ಕರ್ ಜಯಂತಿ ಹಾಗೂ ರಾಮನವಮಿ ಕೂಡ ಇರುವುದರಿಂದ ಲಾಂಗ್ ಹಾಲಿಡೇ ಸೀಸನ್ ಲಾಭ ಪಡೆಯುವ ಉದ್ದೇಶ ಇರಬಹುದು ಎಂಬ ಅಂದಾಜು ಕೇಳಿಬರುತ್ತಿದೆ.

ಭಾರೀ ಬಜೆಟ್‌ನ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನೀಡುತ್ತಿದ್ದು, ಪಿ.ಎಸ್.ವಿನೋದ್ ಛಾಯಾಗ್ರಹಣ ವಹಿಸಿದ್ದಾರೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !