ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬದ ಹೊಸ ತೊಡಕು ಸಡಗರ ರಾಜ್ಯದಲ್ಲಿ ಜೋರಾಗಿದೆ. ಬೆಳ್ಳಂಬೆಳಗ್ಗೆಯೇ ಮಟನ್ ಅಂಗಡಿಗಳ ಮುಂದೆ ಮಾಂಸಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ.
ಮುಂಜಾನೆ 4 ಗಂಟೆಯಿಂದಲೇ ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಈ ಬಾರಿಯ ಯುಗಾದಿ ಭಾನುವಾರ ಬಂದಿತ್ತು. ಮಾರನೇಯ ದಿನ ಸೋಮವಾರ ಬಂದ ಹಿನ್ನೆಲೆಯಲ್ಲಿ ಮಾಂಸಹಾರಿಗಳು, ಇಂದು ಹೊಸ ತೊಡಕು ಆಚರಣೆ ಮಾಡುತ್ತಿದ್ದಾರೆ. ಇನ್ನು ಮಾಂಸಾಹಾರಿಗಳ ಮನೆಯಲ್ಲಿ ಮಾಂಸದ ಅಡುಗೆ ಮಾಡಿದ್ರೆ, ಸಸ್ಯಹಾರಿಗಳ ಮನೆಯಲ್ಲಿ ಪಾಯಸ, ಸಿಹಿ ಅಡುಗೆ ಮಾಡಲಾಗುತ್ತಿದೆ.
ಇನ್ನು ಬೆಂಗಳೂರಿನಲ್ಲೂ ಈ ಹಬ್ಬ ವಿಶೇಷವಾಗಿ ನಡೆಯುತ್ತದೆ. ಮಧ್ಯರಾತ್ರಿಯೇ ಕೆಲವು ಮಾಂಸದ ಅಂಗಡಿಗಳು ತೆರೆದಿವೆ. ಮೈಸೂರು ರಸ್ತೆಯ ಪಾಪಣ್ಣ ಮಟನ್ ಸ್ಟಾಲ್ ತುಂಬಾನೇ ಫೇಮಸ್. ಈ ಅಂಗಡಿಗೆ ಮಾಂಸ ಖರೀದಿಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.
ಅದರಂತೆ ಬೆಂಗಳೂರಿನ ಬನಶಂಕರಿ, ಜೆಪಿ ನಗರ, ಉತ್ತರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವು ಭಾಗಗಳಿಂದ ಜನರು ಬಂದಿದ್ದಾರೆ. ಇಂದು ನಿರೀಕ್ಷೆಗೂ ಮೀರಿ ಮಾಂಸ ಮಾರಾಟ ಹಿನ್ನೆಲೆಯಲ್ಲಿ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬೆಂಗಳೂರಿಗೆ ಕುರಿ, ಮೇಕೆಗಳನ್ನು ತರಿಸಿಕೊಳ್ಳಲಾಗಿದೆ. ಸದ್ಯ ಒಂದು ಕೆಜಿಯ ಮಟನ್‌ಗೆ 800/900 ರುಪಾಯಿ ಇದೆ.