ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಸದ್ಯ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಸ್ಟೇಟ್‌ಮೆಂಟ್ ಸುಳ್ಳಾಗುವಂತೆ ಕಾಣಿಸುತ್ತಿದೆ. ಬರೋಬ್ಬರಿ ಮೂರು ಸೂಪರ್ ಹಿಟ್ ಸಿನಿಮಾ ಕೊಟ್ಟ ರಶ್ಮಿಕಾ ಸಲ್ಮಾನ್ ಖಾನ್ ನಟನೆಯ ಸಿಖಂದರ್ ಸಿನಿಮಾಗಾಗಿ ತುಂಬಾ ಎಕ್ಸೈಟ್ ಆಗಿದ್ದರು. ಆದರೆ ಈ ಸಿನಿಮಾ ಅಂದುಕೊಂಡಷ್ಟು ಕಮಾಯಿ ಮಾಡಿಲ್ಲ.
ರಶ್ಮಿಕಾ ನಟನೆಯ ಅನಿಮಲ್, ಪುಷ್ಪಾ-2 ಹಾಗೂ ಛಾವಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಆದರೆ ಅದೇ ಸಾಲಿಗೆ ಸಿಖಂದರ್ ಸೇರ್ಪಡೆಯಾಗಿಲ್ಲ. ಸಿಖಂದರ್ ನಿರ್ದೇಶಕ ಎಆರ್ ಮುರುಗದಾಸ್ ಅವರಿಂದಲೇ ಸಿನಿಮಾ ಸೋತಿದೆ ಎಂದು ಹೇಳಲಾಗುತ್ತಿದೆ.
ಈಗಿನ ಜನಕ್ಕೆ ಏನು ಬೇಕು? ಅವರ ಟ್ರೆಂಡ್ ಏನು ಎಂದು ತಿಳಿದುಕೊಳ್ಳದೆ ಡೈರೆಕ್ಟರ್ ಹಳೆ ಕಾಲದ ಡೈರೆಕ್ಷನ್ ಸಿನಿಮಾ ಮಾಡಿದ್ದಾರೆ ಎಂದು ಹೇಳಲಾಗಿದೆ. ಎಆರ್ ಮುರುಗದಾಸ್ ಅವರು ‘ಘಜಿನಿ’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಆಗಿನ ಕಾಲದಲ್ಲಿ ಪ್ರೇಕ್ಷಕರ ನಾಡಿ ಮಿಡಿತವನ್ನು ಸರಿಯಾಗಿ ತಿಳಿದುಕೊಂಡು ಅಂಥದ್ದೇ ಚಿತ್ರವನ್ನು ನೀಡಿದ್ದರು.
ಆದರೆ ಈಗ? ಮುರುಗದಾಸ್ ಅವರು ಇತ್ತೀಚೆಗೆ ಹೊಸ ಟ್ರೆಂಡ್ನ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅದೇ ಹಳೆ ಕಥೆಯನ್ನು ಪ್ರೇಕ್ಷಕ ರಿಜೆಕ್ಟ್ ಮಾಡಿದ್ದಾನೆ ಎನ್ನಲಾಗಿದೆ.