ಹೊಸದಿಗಂತ ತುಮಕೂರು :
ಹನಿಟ್ರ್ಯಾಪ್ ನಂತಹ ಹೀನಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು ಎಂದು ಸಚಿವ ರಾಜಣ್ಣ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳು ಪ್ರಭಾವಿ ಇದ್ದಾರೋ ಇಲ್ವೋ, ಇಂತಹ ಕಾನೂನು ಬಾಹಿರ ಕ್ರಮಕ್ಕೆ ಯಾರ ಕುಮ್ಮಕ್ಕಿರಲಿ, ಪ್ರಯತ್ನವಿರಲಿ. ಅವರಿಗೆ ದೇವರು ಒಳ್ಳೆದು ಮಾಡಲ್ಲ ಅನ್ನೋದರ ಜತೆಗೆ ಅವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದರು.
ನಾನು ಹೇಳೋದು ಬೇರೆಯವರಿಗೊಸ್ಕರ ಅಲ್ಲ, ನನ್ನನ್ನು ಸೇರಿಸಿ ಹೇಳ್ತಿರೋದು. ಬೆಂಗಳೂರು, ಮುಂಬೈ ಯಾರುಬೇಕಾದರೂ ಇರಬಹುದು. ನಮ್ಮ ಪಕ್ಷದವ್ರೊ, ಇನ್ನೊಂದು ಪಕ್ಷದವ್ರೋ ಯಾರೇ ಪ್ರಯತ್ನ ಮಾಡ್ಲಿ, ರಾಜಕಾರಣಿಗಳನ್ನ ಹೊರತು ಪಡಿಸಿ ಮಾಡಿರಲಿ. ಈ ರೀತಿಯ ಹೀನ ಕೃತ್ಯಗಳಿಗೆ ಪ್ರಯತ್ನ ಮಾಡಿರೋದು ಖಂಡನಾರ್ಹ ಎಂದರು.
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆ ಆಗ್ತಿದೆ, ಯಾವುದರಲ್ಲಿ ಮಾಡ್ತಾರೋ ಮಾಡಲಿ. ಎಸ್.ಐ.ಟಿ ಮಾಡ್ತಾರೋ ಮತ್ತೊಂದು ಮಾಡ್ತಾರೋ ಮಾಡ್ಲಿ. ಅದು ಗೃಹ ಮಂತ್ರಿಗಳಿಗೆ, ಸಿಎಂಗೆ ಬಿಟ್ಟ ವಿಚಾರ. ನೋಟಿಸ್ ಕೊಟ್ಟರೆ ಉತ್ತರಿಸುತ್ತೇನೆ ಎಂದರು.
ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿರುವ ವಿಚಾರದ ಬಗ್ಗೆ ಚರ್ಚಿಸಿರುವ ಆಡಿಯೋ ವೈರಲ್ ಆಗಿದ್ದು ಈ ತನಿಖೆ ನಡೆಯುತ್ತಿದೆ ಎಂದರು.