ಮಶ್ರೂಮ್ ಫ್ರೈ ರುಚಿಕರ ಮತ್ತು ತಯಾರಿಸಲು ಸುಲಭವಾದ ಖಾದ್ಯವಾಗಿದೆ. ಇದನ್ನು ಸೈಡ್ ಡಿಷ್ ಅಥವಾ ಸ್ನ್ಯಾಕ್ ಆಗಿ ಸೇವಿಸಬಹುದು. ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದು ಆರೋಗ್ಯಕರ ಆಹಾರ ಆಯ್ಕೆಯಾಗಿದೆ. ಸುಲಭವಾದ ತಯಾರಿಕಾ ವಿಧಾನದಿಂದ ನೀವು ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು!
ಬೇಕಾಗುವ ಪದಾರ್ಥಗಳು:
ಮಶ್ರೂಮ್- 1 ಬಟ್ಟಲು
ಶುಂಠಿ- ಸ್ವಲ್ಪ
ಹಸಿ ಮೆಣಸಿನಕಾಯಿ-6
ಬೆಳ್ಳುಳ್ಳಿ-7 ಎಸಳು
ಖಾರದ ಪುಡಿ- 1 ಚಮಚ
ಅರಿಶಿನ ಪುಡಿ- ಅರ್ಧ ಚಮಚ
ಗರಂ ಮಸಾಲ-1 ಚಮಚ
ಕಾಳುಮೆಣಸಿನ ಪುಡಿ- ಅರ್ಧ ಚಮಚ
ಈರುಳ್ಳಿ -1
ಟೊಮಾಟೊ- 2
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಕರಿಬೇವು- ಸ್ವಲ್ಪ
ಮಾಡುವ ವಿಧಾನ:
ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ರುಬ್ಬಿಕೊಂಡ ಪೇಸ್ಟ್ ಹಾಕಿ 2 ನಿಮಿಷ ಕೈಯಾಡಿಸಿ. ಬಳಿಕ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಈರುಳ್ಳಿ, ಟೊಮೆಟಾ ಎಲ್ಲಾ ಹಾಕಿ ಮಿಕ್ಸ್ ಮಾಡಿ ಕೆಂಪಗಾಗುವವರೆ ಹುರಿಯಿರಿ. ಬಳಿಕ ಸ್ವಲ್ಪ ನೀರು ಹಾಕಿ.
ನೀರು ಕುದಿ ಬಂದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಮಶ್ರೂಮ್ ಹಾಕಿ. ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾದೊಡನೆ ಇಳಿಸಿ. ಇದೀಗ ರುಚಿಕರವಾದ ಮಶ್ರೂಮ್ ಫ್ರೈ ಸವಿಯಲು ಸಿದ್ಧ.