ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ತಿಂಗಳಿನಲ್ಲಿ ಸೌತ್ ಸಿನಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕಾದಿದೆ. ಏಪ್ರಿಲ್ ತಿಂಗಳಿನಲ್ಲಿ ಬರೋಬ್ಬರಿ ಏಳು ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಪ್ರಿಯರಿಗೆ ಖುಷಿ ನೀಡಿದೆ.
ಕನ್ನಡದಲ್ಲಿ ಧನ್ವೀರ್ ನಟನೆಯ ‘ವಾಮನ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ದರ್ಶನ್ ಅವರು ಬೆಂಬಲ ನೀಡಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಭರ್ಜರಿ ಮಾಸ್ ಆ್ಯಕ್ಷನ್ನಿಂದ ಕೂಡಿದೆ ಎಂಬುದು ಟ್ರೇಲರ್ ನೋಡಿದವರಿಗೆ ಅರ್ಥವಾಗುತ್ತದೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆ ಕಾಣಲಿದೆ.
ಮಮ್ಮುಟಿ ನಟೆಯ ‘ಬಜೂಕಾ’ ಚಿತ್ರವೂ ಏಪ್ರಿಲ್ 10ರಂದು ಬಿಡುಗಡೆ ಕಾಣಲಿದೆ. ಮಾಸ್ ಆ್ಯಕ್ಷನ್ನಲ್ಲಿ ಮಮ್ಮುಟ್ಟಿ ಅವರು ಮಿಂಚಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಮಲಯಾಳಂ ಸಿನಿಮಾ. ಈ ಚಿತ್ರಕ್ಕೆ ಪ್ರಚಾರ ಜೋರಾಗಿದೆ.ಅಜಿತ್ ನಟನೆಯ ತಮಿಳಿನ ‘ಗುಡ್ ಬ್ಯಾಡ್ ಅಗ್ಲಿ’ ಏಪ್ರಿಲ್ 10ರಂದು ತೆರೆಗೆ ಬರಲಿದೆ. ಇದರಲ್ಲಿ ಅಜಿತ್ ಅವರಿಗೆ ಮೂರು ಶೇಡ್ ಇದೆ ಎನ್ನಲಾಗಿದೆ.
ತಮನ್ನಾ ಭಾಟಿಯಾ ನಟನೆಯ ತೆಲುಗಿನ ‘ಒಡೆಲಾ 2’ ಸಿನಿಮಾ ಏಪ್ರಿಲ್ 17ರಂದು ಬಿಡುಗಡೆ ಕಾಣುತ್ತಿದೆ. ಇದು ಸೂಪರ್ನ್ಯಾಚುರಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ದಿ ಪೆಟ್ ಡಿಟೆಕ್ಟಿವ್’ ಸಿನಿಮಾ ಇದೇ ಏಪ್ರಿಲ್ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅನುಪಮಾ ಪರಮೇಶ್ವರನ್ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ‘ಘಾಟಿ’ ಹೆಸರಿನ ಸಿನಿಮಾ ಮಾಡಿದ್ದಾರೆ. ತೆಲುಗಿನ ಈ ಚಿತ್ರ ಏಪ್ರಿಲ್ 18ರಂದು ತೆರೆಗೆ ಬರಲಿದೆ. ಲವ್ಲಿ’ ಹೆಸರಿನ ಸಿನಿಮಾ ಏಪ್ರಿಲ್ 4ರಂದು ತೆರೆಗೆ ಬರಲಿದೆ. ಮ್ಯಾಥೀವ್ ಥಾಮಸ್ ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ನೊಣ ಕೂಡ ಇದೆ. ಈ ನೊಣ ಮಾತನಾಡುವ ಶಕ್ತಿಯನ್ನು ಹೊಂದಿದೆ.