ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕನ ಮಗಳ ಮದುವೆಗೆ ಎಷ್ಟು ಕೇಳಿದರೂ ರಜೆ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಚಾಲಕನೊಬ್ಬ ಬಸ್‌ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿ ಬಸ್ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಅಕ್ಕನ ಮಗಳ ಮದುವೆಯಿದ್ದ ಕಾರಣ ಕಳೆದ ಮೂರು ದಿನಗಳ ಹಿಂದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ರಜೆ ನೀಡದ ಹಿನ್ನೆಲೆ ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ಅವರು ಅದೇ ಬಸ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.