ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಬುಧವಾರ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಪೊಲೀಸರು ಮಾಂಡ್ಲಾ ಜಿಲ್ಲೆಯ ಕಾಡಿನಲ್ಲಿ ಇಬ್ಬರು ಶಸ್ತ್ರಸಜ್ಜಿತ ಮತ್ತು ವಾಂಟೆಡ್ ಮಹಿಳಾ ನಕ್ಸಲರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಈ ಕುರಿತು ಮಧ್ಯಪ್ರದೇಶ ವಿಶೇಷ ಡಿಜಿ(ನಕ್ಸಲ್ ವಿರೋಧಿ) ಪಂಕಜ್ ಶ್ರೀವಾಸ್ತವ ಅವರು, ದೃಢಪಡಿಸಿದ್ದು, ಹತ್ಯೆಗೀಡಾದ ಛತ್ತೀಸ್‌ಗಢ ಮೂಲದ ಈ ಮಹಿಳಾ ನಕ್ಸಲರ ತಲೆಗೆ ತಲಾ 14 ಲಕ್ಷ ರೂ. ಬಹುಮಾನ. ಅಂದರೆ ಒಟ್ಟಾರೆಯಾಗಿ 28 ಲಕ್ಷ ರೂ. ಬಹುಮಾನವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.
ಮಮತಾ ಮತ್ತು ಪ್ರಮೀಳಾ ಎಂದು ಗುರುತಿಸಲಾದ ಮಹಿಳಾ ಮಾವೋವಾದಿ ಜೋಡಿಯು ಛತ್ತೀಸ್‌ಗಢ ಮೂಲದವರಾಗಿದ್ದು, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಬಾಲಘಾಟ್, ಮಾಂಡ್ಲಾ ಮತ್ತು ಕವರ್ಧಾ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಉಗ್ರಗಾಮಿಗಳು(ಎಲ್‌ಡಬ್ಲ್ಯೂಇಗಳು) ಕನ್ಹಾ-ಭೋರಾಮ್‌ದೇವ್ ವಿಭಾಗದ ಭಾಗವಾಗಿದ್ದರು ಎಂದು ಅವರು ಹೇಳಿದ್ದಾರೆ.