ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಟ್ ಹಾಟ್ ವೇದರ್ಗೆ ಸಿಲಿಕಾನ್ ಸಿಟಿಯ ಜನರು ಬಳಲಿ ಬೆಂಡಾಗಿರುವ ಜನಸಾಮಾನ್ಯರು ಬೇಸಿಗೆಯ ಧಗೆ ನೀಗಿಸಿಕೊಳ್ಳಲು ನಾನಾ ಮಾರ್ಗಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕೂಲಿಂಗ್ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ಶೋರೂಂಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.
ವಿಪರೀತ ಬಿಸಿಲಿನ ಪರಿಣಾಮ ಹೊರಗಡೆ ಓಡಾಡುವುದು ಕಡಿಮೆ ಮಾಡಿರುವ ಜನರು, ತಣ್ಣಗೆ ಮನೆಯಲ್ಲೇ ಇರೋಣ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಆದರೆ ಮನೆಯಲ್ಲೂ ಧಗ ಧಗ ಎನ್ನುವ ವಾತಾವರಣ ಇದ್ದು, ಏಸಿ, ಕೂಲರ್, ಫ್ರಿಡ್ಜ್ ಹಾಗೂ ಫ್ಯಾನ್ಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಇಷ್ಟು ದಿನ ಡಲ್ ಹೊಡೆಯುತ್ತಿದ್ದ ಇವುಗಳ ವ್ಯಾಪಾರ ವಹಿವಾಟು ಇದೀಗ ಚುರುಕು ಪಡೆದುಕೊಂಡಿದೆ.
ವಿವಿಧ ಶ್ರೇಣಿಯ ಏರ್ ಕೂಲರ್ಗಳು ಬೆಲೆ 10 ಸಾವಿರ ರೂ.ದಿಂದ 25 ಸಾವಿರ ರೂ. ವರೆಗೆ ಅಂದರೆ ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ. ವಿವಿಧ ಶ್ರೇಣಿಯ ಏಸಿಗಳು 28 ಸಾವಿರ ರೂ. ದಿಂದ 70 ಸಾವಿರ ರೂ.ಗೆ ಲಭ್ಯವಿದ್ದು, ಶೇಕಡಾ 20 ರಷ್ಟು ಬೆಲೆ ಏರಿಕೆ ಆಗಿದೆ. ವಿವಿಧ ಶ್ರೇಣಿಯ ಫ್ರಿಡ್ಜ್ಗಳು 14 ಸಾವಿರ ರೂ.ದಿಂದ 44 ಸಾವಿರ ರೂ. ವರೆಗೂ ಲಭ್ಯವಿದ್ದು, ಶೇಕಡಾ 15 ರಷ್ಟು ಬೆಲೆ ಏರಿಕೆ ಆಗಿದೆ. ಫ್ಯಾನ್ಗಳ ಬೆಲೆಯಲ್ಲಿ ಸಹ 15% ಏರಿಕೆ ಆಗಿದೆ.