ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಆಕ್ಟೀವ್ ಆಗಿದ್ದಾರೆ. ಅವರು ಬ್ಯುಸಿ ಇದ್ದರೂ ಅವರ ಟೀಂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಯೇ ಇರುತ್ತದೆ. ಫ್ರೀ ಇದ್ದಾಗೆಲ್ಲಾ ರಶ್ಮಿಕಾ ಫ್ಯಾನ್ಸ್ ಜೊತೆ ಮಾತನಾಡ್ತಾರೆ, ತಮ್ಮ ದಿನಚರಿ ಬಗ್ಗೆ ಹೇಳಿಕೊಳ್ತಾರೆ.
ಇದೇ ಏ.5ರಂದು ರಶ್ಮಿಕಾ ಜನ್ಮದಿನ, ಈ ಬಗ್ಗೆ ರಶ್ಮಿಕಾ ಪೋಸ್ಟ್ ಒಂದನ್ನು ಮಾಡಿದ್ದಾರೆ. ಎಷ್ಟೊಂದು ಮಂದಿ ಹೇಳ್ತಾರೆ ದೊಡ್ಡವರಾಗ್ತಾ ಆಗ್ತಾ ಬರ್ಥಡೇ ಮೇಲೆ ಇಂಟ್ರೆಸ್ಟ್ ಕಡಿಮೆಯಾಗುತ್ತದೆ ಎಂದು ಬಟ್ ನಂಗೆ ಹಾಗಿಲ್ಲ ಈಗಲೂ ಬರ್ಥಡೇ ಮಂಥ ಎಂದೇ ನಾನು ಎಕ್ಸೈಟ್ ಆಗಿದ್ದೇನೆ. ನಾನು 29 ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ನಾನು ಮತ್ತೊಂದು ವರ್ಷವನ್ನು ಆರೋಗ್ಯಕರ, ಸಂತೋಷದಾಯಕ ಮತ್ತು ಸುರಕ್ಷಿತ ಕಳೆದಿದ್ದೇನೆ. ಈಗ ಅದನ್ನು ಆಚರಿಸುವುದು ಮತ್ತಷ್ಟು ಯೋಗ್ಯ ಎಂದು ಬರೆದುಕೊಂಡಿದ್ದಾರೆ.