ಬಾಣಸಿಗನಿಗೆ 1 ಕೋಟಿ, ಮುದ್ದಿನ ನಾಯಿಗೂ ಲಕ್ಷ ಲಕ್ಷ ಹಣ: ಇದು ರತನ್ ಟಾಟಾ ಕೊನೆಯ ವಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕೊನೆಯ ವಿಲ್ ಬಹಿರಂಗವಾಗಿದ್ದು, ಇದರಲ್ಲಿ ಅವರು ತಮ್ಮೊಂದಿಗೆ ಸಂಬಂಧ ಹೊಂದಿದ್ದ ಎಲ್ಲ ಜನರನ್ನು ನೆನಪಿಸಿಕೊಂಡಿದ್ದಾರೆ.

ರತನ್ ಟಾಟಾ ಬಿಟ್ಟು ಹೋದ 3,800 ಕೋಟಿ ರೂಪಾಯಿ ಆಸ್ತಿಯಲ್ಲಿ ಎರಡು ಟ್ರಸ್ಟ್‌ಗೆ ಬಹುಪಾಲು ನೀಡಿದ್ದಾರೆ. ಹಾಗಂತ ರತನ್ ಟಾಟಾ ಯಾರನ್ನೂ ಮರೆತಿಲ್ಲ. ಅದರಲ್ಲೂ ಪ್ರಮುಖವಾಗಿ ತಮ್ಮ ಮುದ್ದಿನ ಸಾಕು ನಾಯಿ ಟೀಟೂಗೂ ಆಸ್ತಿಯಲ್ಲೂ ಪಾಲು ಹಂಚಿಕೆ ಮಾಡಿದ್ದಾರೆ. ಇನ್ನು ರತನ್ ಟಾಟಾ ಮನೆ ಹಾಗೂ ಕಚೇರಿ ಸಿಬ್ಬಂದಿಗಳಿಗೂ ಪಾಲು ನೀಡಿದ್ದಾರೆ.

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಕಳೆದ ವರ್ಷ ಅಕ್ಟೋಬರ್ 9, 2024 ರಂದು ನಿಧನರಾದರು. ಇದಕ್ಕೂ ಮೊದಲು ಅಂದರೆ ಫೆಬ್ರವರಿ 23, 2022 ರಂದು ತಮ್ಮ ಕೊನೆಯ ವಿಲ್ ಮಾಡಿಸಿದ್ದರು. ರತನ್ ಟಾಟಾ ತಮ್ಮ ಆಸ್ತಿ ಹಂಚಿಕೆ ವಿಚಾರವಾಗಿ ಬರೆದಿದ್ದಾರೆ ಎನ್ನಲಾದ ವಿಲ್ ಇದೀಗ ಬಹಿರಂಗವಾಗಿದ್ದು, ಯಾರಿಗೆ ಎಷ್ಟು ಆಸ್ತಿ ಸಿಗಬೇಕು ಎಂಬುದು ಬಯಲಾಗಿದೆ.

ವಿಲ್ ನಲ್ಲೇನಿದೆ?
ರತನ್ ಟಾಟಾಗೆ ನಾಯಿ ಎಂದರೆ ಪಂಚಪ್ರಾಣ. ಕೇವಲ ಅವರ ಸಾಕು ನಾಯಿ ಮಾತ್ರವಲ್ಲ, ಯಾವುದೇ ನಾಯಿ ಕಂಡರೂ ರತನ್ ಟಾಟಾಗೆ ಪ್ರೀತಿ ಹೆಚ್ಚು. ತಮ್ಮ ಆಸ್ತಿಯಲ್ಲಿ ಮುದ್ದಿನ ನಾಯಿ ಟೀಟೂಗೆ 12 ಲಕ್ಷ ರೂಪಾಯಿ ಹಂಚಿಕೆ ಮಾಡಿದ್ದಾರೆ. ಪ್ರತಿ 3 ತಿಂಗಳಗೆ ಟೀಟೂ ಖರ್ಚಿಗೆ 30,000 ರೂಪಾಯಿ ಸಿಗಲಿದೆ. ಈ ನಾಯಿಯನ್ನು ಆಡುಗೆ ತಯಾರಿಸುತ್ತಿದ್ದ ರಾಜನ್ ಶಾ ನೋಡಿಕೊಳ್ಳುವಂತೆ ವಿಲ್‌ನಲ್ಲಿ ಸೂಚಿಸಿದ್ದರು. ಇದರಂತೆ ರಾಜನ್ ಶಾ, ನಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಅವರ ಸಂಪತ್ತಿನ ಗಮನಾರ್ಹ ಭಾಗವನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ಮತ್ತು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್‌ಗೆ ನಿರ್ದೇಶಿಸಲಾಗುವುದು, ಇದು ಅವರ ಲೋಕೋಪಕಾರಿ ಉಪಕ್ರಮಗಳನ್ನು ಮುಂದುವರಿಸುತ್ತದೆ ಎನ್ನಲಾಗಿದೆ.

ರತನ್ ಟಾಟಾ ವಿಲ್ ನಲ್ಲಿರುವಂತೆ 3.5 ಕೋಟಿ ರೂಗಳನ್ನು ಅವರ ಕಚೇರಿ ಮತ್ತು ಮನೆಯ ಸಿಬ್ಬಂದಿಗಳು ಅಂದರೆ ಮನೆಗೆಲಸದವರು, ಚಾಲಕರು ಮತ್ತು ಕಚೇರಿ ಸಿಬ್ಬಂದಿಗಳಿಗೆ ಮೀಸಲಿರಿಸಿದ್ದಾರಂತೆ. ಈ ಪೈಕಿ ಟಾಟಾ ಅವರ ಮನೆಯಲ್ಲಿ ಸತತ 7 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ ಮನೆಗೆಲಸದವರಿಗೆ ತಲಾ 15 ಲಕ್ಷ ರೂ ನೀಡಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

ಅಂತೆಯೇ ಪಾರ್ಟ್ ಟೈಮ್ ಹೆಲ್ಪರ್ ಗಳು, ಕಾರ್ ಕ್ಲೀನರ್ ಗಳಿಗೆ ತಲಾ 1 ಲಕ್ಷ ರೂ ನೀಡಬೇಕು. ರತನ್ ಟಾಟಾ ಅವರ ಸುದೀರ್ಘ ಅವಧಿಯ ಅಡುಗೆ ಕೆಲಸಗಾರ ರಜನ್ ಶಾ ಗೆ 1 ಕೋಟಿ ರೂ ನೀಡಬೇಕು ಮತ್ತು ಅವರ 51 ಲಕ್ಷ ರೂಗಳ ಸಾಲವನ್ನು ಮನ್ನಾ ಮಾಡಬೇಕು ಮತ್ತು ಬಾಣಸಿಗ ಸುಬ್ಬಯ್ಯ ಕೋನರ್ 66 ಲಕ್ಷ ರೂ ನೀಡಿ, ಅವರ 36 ಲಕ್ಷ ರೂ ಸಾಲವನ್ನು ಮನ್ನಾ ಮಾಡಬೇಕು ಎಂದು ಟಾಟಾ ವಿಲ್ ನಲ್ಲಿ ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶಾಂತನು ನಾಯ್ಡುಗೆ 1 ಕೋಟಿ ರೂ ಶೈಕ್ಷಣಿಕ ಸಾಲ ಮನ್ನಾ ಇನ್ನು ರತನ್ ಟಾಟಾ ಅವರ ಸ್ನೇಹಿತ ಶಾಂತನು ನಾಯ್ಡು ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಎಂಬಿಎ ವ್ಯಾಸಂಗ ಮಾಡಲು ಟಾಟಾ ಸಂಸ್ಥೆ ನೀಡಿದ್ದ 1 ಕೋಟಿ ರೂ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಬೇಕು ಎಂದು ರತನ್ ಟಾಟಾ ವಿಲ್ ನಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬ ಸದಸ್ಯರಿಗೆ ಸಿಕ್ಕಿದ್ದೇನು?
ರತನ್ ಟಾಟಾ ಅವರು 800 ಕೋಟಿ ಮೌಲ್ಯದ ತಮ್ಮ ಎಸ್ಟೇಟ್‌ನ ಗಣನೀಯ ಭಾಗವನ್ನು ತಮ್ಮ ಕುಟುಂಬ ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆ. ಅವರ ಮಲ ಸಹೋದರಿಯರಾದ ಶಿರಿನ್ ಜೆಜೀಭೋಯ್ ಮತ್ತು ಡಯಾನಾ ಜೆಜೀಭೋಯ್, ಟಾಟಾ ಗ್ರೂಪ್‌ನ ಮಾಜಿ ಉದ್ಯೋಗಿ ಮೋಹಿನಿ ಎಂ. ದತ್ತಾ ಅವರೊಂದಿಗೆ ಬ್ಯಾಂಕ್ ಠೇವಣಿಗಳು, ಹಣಕಾಸು ಹೂಡಿಕೆಗಳು, ಕಲಾ ಸಂಗ್ರಹಗಳು ಮತ್ತು ಅಮೂಲ್ಯವಾದ ಕೈಗಡಿಯಾರಗಳನ್ನು ಆನುವಂಶಿಕವಾಗಿ ಪಡೆಯುತ್ತಾರೆ.ಅವರ ಸಹೋದರ ಜಿಮ್ಮಿ ನೇವಲ್ ಟಾಟಾ ಅವರು ಕುಟುಂಬದ ಜುಹು ಬಂಗಲೆಯ ಒಂದು ಪಾಲನ್ನು, ಬೆಳ್ಳಿ ಪಾತ್ರೆಗಳು ಮತ್ತು ಕೆಲವು ಆಭರಣಗಳನ್ನು ಸಿಮೋನ್ ಟಾಟಾ ಮತ್ತು ನೋಯೆಲ್ ಟಾಟಾ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ರತನ್ ಟಾಟಾ ಅವರ ಆಪ್ತ ಸ್ನೇಹಿತ ಮೆಹ್ಲಿ ಮಿಸ್ತ್ರಿ ಅವರು ಅಲಿಬಾಗ್ ಆಸ್ತಿ ಮತ್ತು .25-ಬೋರ್ ಪಿಸ್ತೂಲ್ ಸೇರಿದಂತೆ ಮೂರು ಬಂದೂಕುಗಳ ಸಂಗ್ರಹವನ್ನು ಆನುವಂಶಿಕವಾಗಿ ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!