ಬ್ಯಾಂಕಾಕ್ ನಲ್ಲಿ ಥಾಯ್ ವರ್ಶನ್‌ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥಾಯ್ಲೆಂಡ್‌ಗೆ ತೆರಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ಯಾಕಾಂಕ್​ಗೆ ಬಂದಿಳಿದ್ದು, ಈ ವೇಳೆ ಪ್ರೈಮ್ ಮಿನಿಸ್ಟರ್ ಬ್ಯಾಕಾಂಕ್​ ಜನತೆ ಜಯಗೋಘದೊಂದಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

ಈ ವೇಳೆ ಪ್ರಧಾನಿ ಮತ್ತೊಂದು ವಿಶೇಷ ಘಟನೆ ನಡೆದಿದ್ದು, ಮೋದಿ ಥಾಯ್​ ರಾಮಾಯಣವನ್ನು ವೀಕ್ಷಿಸಿದ್ದಾರೆ.

ಬ್ಯಾಂಕಾಕ್ ನೆಲದಲ್ಲಿ ಪ್ರಧಾನಿ ಮೋದಿ ಥಾಯ್​ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದ್ದು, ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ ‘ರಾಮಕಿಯೆನ್’ ಅನ್ನು ವೀಕ್ಷಿಸಿದ್ದಾರೆ.

ಈ ಪ್ರವಾಸದ ಬಗ್ಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದು ಕೊಂಡಿದ್ದು, ‘ಬಿಮ್‌ಸ್ಟೆಕ್ ದೇಶಗಳ ನಾಯಕರನ್ನು ಭೇಟಿ ಮಾಡಲು ಮತ್ತು ಭಾರತೀಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ಫಲಪ್ರದವಾಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

Imageಥಾಯ್ಲೆಂಡ್‌ ಪ್ರವಾಸದ ಬಳಿಕ ಪ್ರಧಾನಿ ಮೋದಿಯವರು ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಏಪ್ರಿಲ್‌ 4ರಿಂದ 6ರವರೆಗೆ ಅವರು ಶ್ರೀಲಂಕಾ ಪ್ರವಾಸದಲ್ಲಿ ಇರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here