ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಸಿನಿಪ್ರಿಯರಿಗೆ ಹಬ್ಬದಂತಾಗಿದೆ. ಯಾವೆಲ್ಲಾ ಸಿನಿಮಾ ರಿಲೀಸ್ ಆಗಿದೆ ಇಲ್ಲಿದೆ ಡೀಟೇಲ್ಸ್..
ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಶಿವಮ್ಮ’ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಶಿವಮ್ಮ ಸಿನಿಮಾ ಭಿನ್ನಕತೆಯಳ್ಳ ಸಿನಿಮಾ ಆಗಿದ್ದು, ಕೆಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ.
ಕನ್ನಡಿಗ ದೀಕ್ಷಿತ್ ಶೆಟ್ಟಿ, ನವದೀಪ್ ಕೋಮಲಿ ಪ್ರಸಾದ್ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ‘ಟಚ್ ಮೀ ನಾಟ್’ ಜಿಯೋ ಹಾಟ್ಸ್ಟಾರ್ನಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ.
ಆರ್ ಮಾಧವನ್, ಸಿದ್ಧಾರ್ಥ್, ನಯನತಾರಾ ನಟಿಸಿರುವ ‘ಟೆಸ್ಟ್’ ಸಿನಿಮಾ ಏಪ್ರಿಲ್ ನಾಲ್ಕರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಸಮುದ್ರದಡದಲ್ಲಿ ನಡೆಯುವ ಅದ್ಭುತ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕಿಂಗ್ಸ್ಟನ್’ ಏಪ್ರಿಲ್ 4 ರಂದು ಜೀ 5ನಲ್ಲಿ ಬಿಡುಗಡೆ ಆಗಿದೆ.
ನಿಜ ಘಟನೆ ಆಧರಿಸಿದ ಸಿನಿಮಾ ‘ಕಾಫಿರ್’ ಜೀ5ನಲ್ಲಿ ಇದೇ ವಾರ ತೆರೆಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯೊಬ್ಬಾಕೆ ತಪ್ಪಿ ಭಾರತದ ಬಾರ್ಡರ್ ದಾಟಿ ಬಂದು ಇಲ್ಲಿ ಸೆರೆ ಸಿಕ್ಕಿ ಬಿಡುತ್ತಾಳೆ.