ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರು ರಾಜ್ಯ ಸರಕಾರದ ಕಳುಹಿಸಿದ್ದ ಪಂಚಾಯತ್ ರಾಜ್ ವಿವಿ ಕುಲಪತಿ ನೇಮಕ ತಿದ್ದುಪಡಿ ಕುರಿತು ವಿಧೇಯಕಕ್ಕೆ ಅನುಮೋದನೆ ನೀಡದೆ ವಾಪಸ್ ಕಳುಹಿಸಿದ್ದಾರೆ.
ಪಂಚಾಯತ್ ರಾಜ್ ವಿವಿ ಕುಲಪತಿ ನೇಮಕ ವಿಚಾರಕ್ಕೆ ರಾಜಪಾಲರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು, ವಿವಿ ತಿದ್ದುಪಡಿ ವಿಧೇಯಕ ಅನುಮೋದನೆ ನೀಡದೆ ರಾಜ ಸರ್ಕಾರಕ್ಕೆ ಸ್ಪಷ್ಟನೆ ಕೇಳಿ ವಾಪಸ್ ಕಳುಹಿಸಿದ್ದಾರೆ.