ಹೊಸದಿಗಂತ ಶಿವಮೊಗ್ಗ:
ಆಟದ ಮೈದಾನಕ್ಕೆ ಅಕ್ರಮವಾಗಿ ಬೇಲಿ ಹಾಕಲು ರೈಲ್ವೆ ಕಂಬಿಗಳನ್ನು ಬಳಸಿದವರ ಮೇಲೆ ಇದುವರೆಗೂ ಕೇಸು ದಾಖಲಿಸುವಲ್ಲಿ ವಿಫಲವಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಡಿಸಿ ಕಚೇರಿ ಎದುರಿನ ಆಟದ ಮೈದಾನವನ್ನು ಹಾಗೆಯೇ ಉಳಿಸುವಂತೆ ಒತ್ತಾಯಿಸಿ ರಾಷ್ಟ್ರ ಭಕ್ತರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಡಿಸಿ ಕಚೇರಿ ಎದುರಿನ ಮೈದಾನ ಸಂಪೂರ್ಣವಾಗಿ ಆಟದ ಮೈದಾನ. ಅದು ಮಹಾನಗರ ಪಾಲಿಕೆ ಆಸ್ತಿ. ಅದಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದಾರೆ. ಜೊತೆಗೆ ಬೇಲಿ ಹಾಕಲು ರೈಲ್ವೆ ಕಂಬಿಗಳನ್ನು ಬಳಕೆ ಮಾಡಿದ್ದಾರೆ. ರೈಲ್ವೆ ಆಸ್ತಿ ಕಳ್ಳತನ ಮಾಡುವುದು ಕ್ರಿಮಿನಲ್ ಅಪರಾಧ ಆದರೂ ಇಲ್ಲಿನ ಪೊಲೀಸರು ಈ ಸಂಬಂ‘ ಪ್ರಕರಣ ದಾಖಲಿಸಿಲ್ಲ. ಜೊತೆಗೆ ಅಕ್ರಮ ಕೆಲಸ ಮಾಡಿದವರನ್ನು ಬಂಧಿಸಿಲ್ಲ. ಇದರಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಅನು‘ವಿಸಿದೆ. ಅವರನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಹಾಗಾಗಿ ಒಂದು ನಿಮಿಷ ಕೂಡ ಅವರು ಜಿಲ್ಲಾ ರಕ್ಷಣಾಧಿಕಾರಿ ಆಗಿ ಮುಂದುವರೆಯಬಾರದು. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.