ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದಿದ ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಅವರು ಸೀದಿ ಬಾತ್ ವಿತ್ ಇರ್ಫಾನ್ ಪಠಾಣ್ ಎನ್ನುವ ಕಾರ್ಯಕ್ರಮವೊಂದನ್ನು ಶುರು ಮಾಡಿದ್ದಾರೆ. ಇರ್ಫಾನ್ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದಾರೆ ಎನ್ನುವ ಮಾತಿಗೆ ಪ್ರೋಗ್ರಾಮ್ ಮೂಲಕ ಉತ್ತರ ನೀಡಿದ್ದಾರೆ.
ಇರ್ಫಾನ್ ಕೆಲವು ಆಟಗಾರರನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡುತ್ತಿದ್ದಾರೆ, ಸೋಶಿಯಲ್ ಮೀಡಿಯಾ ಆಕ್ಟಿವಿಟಿ ಸರಿಯಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಹೀಗಾಗಿ ಇರ್ಫಾನ್ ಅವರನ್ನು ಬ್ಯಾನ್ ಮಾಡಲಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆ ಅಧಿಕೃತ ಮಾಹಿತಿ ಇಲ್ಲ.
ಐಪಿಎಲ್ 2025 ರ ಕಾಮೆಂಟರಿ ತಂಡದಿಂದ ಹೊರಹಾಕಿದ ನಂತರ ಇರ್ಫಾನ್ ಪಠಾಣ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ‘ಸೀಧಿ ಬಾತ್ ವಿತ್ ಇರ್ಫಾನ್ ಪಠಾಣ್’ ಎಂದು ಹೆಸರಿಟ್ಟು, ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಚಾನೆಲ್ ಶುರು ಮಾಡಿ ಎರಡು ವಾರಗಳಾಗಿದ್ದು, ಸರಿಸುಮಾರು ಎರಡು ಲಕ್ಷ ಸಬ್‌ಸ್ಕ್ರೈಬರ್ಸ್ ಆಗಿದ್ದಾರೆ.