ಯುಜಿಸಿಯಿಂದ ಹೊಸ ಘೋಷಣೆ: ವಿದೇಶಿ ಪದವಿಯ ಮಾನ್ಯತೆಗೆ ಮುಂದಾದ ಅನುದಾನ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದೇಶದ ಶಿಕ್ಷಣ ಸಂಸ್ಥೆಗಳಿಂದ ಪಡೆದ ವಿದ್ಯಾರ್ಹತೆಗಳಿಗೆ ಮಾನ್ಯತೆ ನೀಡುವುದಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ನಿಯಮಗಳನ್ನು ಘೋಷಿಸಿದೆ.

ವಿದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಂದ ಪಡೆದ ವಿದ್ಯಾರ್ಹತೆಗೆ ಸಮಾನ ಪದವಿ ನೀಡುವುದಕ್ಕೆ ಕೂಡ ಈ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಪದವಿ ಪಡೆದು ದೇಶಕ್ಕೆ ಮರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಯುಜಿಸಿ ಈ ನಿಯಮಗಳನ್ನು ರೂಪಿಸಿದೆ ಎನ್ನಲಾಗಿದೆ.

ವಿದೇಶದಲ್ಲಿ ವಿದ್ಯಾರ್ಹತೆ ಪಡೆದ ವಿದ್ಯಾರ್ಥಿಗಳು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವಾ ಉದ್ಯೋಗ ಗಿಟ್ಟಿಸಲು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!