CINE | ರಶ್ಮಿಕಾ ಬರ್ಥ್‌ಡೇ ಸ್ಪೆಷಲ್‌; ಒಮನ್‌ನಲ್ಲಿ ಸುತ್ತಾಡಿದ ಲವ್‌ಬರ್ಡ್ಸ್‌, ಬೀಚ್‌ನಲ್ಲಿ ಮಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಡೇಟಿಂಗ್‌ ಮಾಡ್ತಿರೋ ವಿಚಾರ ಈಗ ಎಲ್ಲೆಡೆ ಓಪನ್‌ ಆಗಿಯೇ ಇದೆ.

ವಿಜಯ್ ದೇವರಕೊಂಡ ಹಾಕಿರೋ ಫೋಟೋದಲ್ಲೂ ಇದೇ ಬಾವುಟ ಕಾಣಿಸಿದೆ. ಹೀಗಾಗಿ, ಇಬ್ಬರೂ ಒಮನ್​ನಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇವರ ಮಧ್ಯೆ ಪ್ರೀತಿ ಇರೋ ವಿಚಚಾರ ಖಚಿತವಾಗಿದೆ.ಸದ್ಯ ಎರಡು ದಿನಗಳ ಹಿಂದಷ್ಟೇ ನಟಿ ರಶ್ಮಿಕಾ ಮಂದಣ್ಣ ಜನ್ಮದಿನವನ್ನು ಆಚರಿಸಿಕೊಂಡಿದ್ದರು.

ರಶ್ಮಿಕಾ ಹಾಗೂ ವಿಜಯ್ ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ. ಆದರೆ, ಅದು ಸದ್ಯಕ್ಕೆ ನೆರವೇರುವ ಸೂಚನೆ ಇಲ್ಲ. ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಈಗ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ವಿವಾಹ ಆದರೆ ಬೇಡಿಕೆ ಕಡಿಮೆ ಆಗುತ್ತದೆ ಎನ್ನುವ ಭಯ ಅವರದ್ದು.ವಿಜಯ್‌ ಹಾಗೂ ರಶ್ಮಿಕಾ ಒಮನ್‌ಗೆ ಹಾರಿದ್ದಾರೆ. ಅಲ್ಲಿರುವ ಬೀಚ್‌ನಲ್ಲಿ ಇಬ್ಬರೂ ಸುತ್ತಾಡಿದ್ದು, ಸಪರೇಟ್‌ ಆದ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಆದರೆ ಲೊಕೇಷನ್‌ ಒಂದೇ ಎನ್ನುವ ವಿಷಯ ಈಸಿಯಾಗಿ ಗೊತ್ತಾಗುವಂತೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರೋ ಒಂದು ಫೋಟೋದಲ್ಲಿ ಹಿಂಭಾಗದಲ್ಲಿ ಕೆಂಪು ಬಣ್ಣದ ಬಾವುಟವನ್ನು ಹಾಕಲಾಗಿದೆ. ಅದು ಬ್ಯಾಕ್​ಗ್ರೌಂಡ್​ನಲ್ಲಿ ಕಾಣಿಸಿದೆ. ಇಷ್ಟೇ ಆಗಿದ್ದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!