ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀಲಾಲಾಗೆ ಕ್ರೌಡ್ ಒಂದರಲ್ಲಿ ಕೆಟ್ಟ ಅನುಭವ ಆಗಿದೆ. ಜನರ ಮಧ್ಯೆ ಹೋಗುವಾಗ ಕೆಲವರು ಆಕೆಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ. ಬಹುಬೇಡಿಕೆ ನಟಿಯ ತೋಳು ಹಿಡಿದು ಕೆಲವರು ಬಲವಂತವಾಗಿ ಎಳೆದಾಡಿದ್ದಾರೆ. ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶೂಟಿಂಗ್ ಸಲುವಾಗಿ ಚಿತ್ರತಂಡ ಇತ್ತೀಚೆಗೆ ಡಾರ್ಜಿಲಿಂಗ್‌ಗೆ ಹೋಗಿತ್ತು. ಚಿತ್ರೀಕರಣ ಮುಗಿಸಿ ಕಾರ್ತಿಕ್ ಆರ್ಯನ್ ಜೊತೆ ಹಿಂತಿರುಗುತ್ತಿದ್ದಾಗ, ಸ್ಥಳೀಯರು ಮತ್ತು ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಕಾರ್ತಿಕ್ ಮುಂದೆ ನಡೆದರೆ, ಶ್ರೀಲೀಲಾ ನಗುತ್ತಾ ಹಿಂದೆ ಬರುತ್ತಿದ್ದರು. ಈ ವೇಳೆ ಶ್ರೀಲೀಲಾರನ್ನು ಎಳೆದಾಡಿರುವುದು ಕಂಡುಬಂದಿದೆ.
ನಟಿಗೆ ಬಾಡಿಗಾರ್ಡ್ಸ್ ರಕ್ಷಣೆ ನೀಡುತ್ತಿದ್ದರೂ, ಗುಂಪಿನಲ್ಲಿದ್ದ ಕೆಲವರು ಶ್ರೀಲೀಲಾ ಅವರ ತೋಳನ್ನು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋದರು. ಘಟನೆಯಿಂದ ನಟಿ ಆಘಾತಕ್ಕೊಳಗಾದಳು. ಕೂಡಲೇ ಅಂಗರಕ್ಷಕರು ಅವರನ್ನು ಬಿಡಿಸಲು ಮುಂದಾದರು. ನಟಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಮುಂದೆ ನಡೆಯುತ್ತಿದ್ದ ಕಾರ್ತಿಕ್ ಆರ್ಯನ್ ಅವರಿಗೆ ಈ ಘಟನೆ ಆ ತಕ್ಷಣಕ್ಕೆ ಗೊತ್ತಾಗಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Evadra aa laagesadu 🤣🤣🤣🤣🤣#SreeLeela pic.twitter.com/fd8citrIhz
— Radoo (@Chandan_radoo) April 6, 2025