ಸಾಮಾಗ್ರಿಗಳು
ಅಲಸಂದೆ ಕಾಳು – 300 ಗ್ರಾಂ
ಈರುಳ್ಳಿ – 1
ಕರಿಬೇವು – 2 ಎರಡು ಎಲೆ
ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿ ಮೆಣಸಿನಕಾಯಿ ಪೇಸ್ಟ್ – 2 ಟೀಸ್ಪೂನ್
ಗರಂ ಮಸಾಲ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಎಣ್ಣೆ – ಡೀಪ್ ಫ್ರೈ ಮಾಡಲು ಬೇಕಾಗುವಷ್ಟು
ಮಾಡುವ ವಿಧಾನ
ಮೊದಲು ಅಲಸಂದೆ ಕಾಳುಗಳನ್ನು ಬೌಲ್‌ನಲ್ಲಿ ಹಾಕಿ ತೊಳೆದುಕೊಳ್ಳಿ. ಸಾಕಷ್ಟು ನೀರು ಸೇರಿಸಿ ನಾಲ್ಕು ಗಂಟೆ ನೆನೆಸಿಡಿ. ಬಳಿಕ ಅಲಸಂದೆ ಕಾಳಿನಲ್ಲಿರುವ ನೀರನ್ನು ಸೋಸಿಕೊಳ್ಳಿ.
ಸೋಸಿದ ಅರ್ಧ ಕಪ್ ಅಲಸಂದೆ ಕಾಳನ್ನು ತೆಗೆದು ಪಕ್ಕಕ್ಕಿಡಿ. ಉಳಿದ ಬೇಳೆಯನ್ನು ಸ್ವಲ್ಪ ಪ್ರಮಾಣದಲ್ಲಿ ಮಿಕ್ಸರ್ ಜಾರ್‌ನಲ್ಲಿ ಹಾಕಿ ಒರಟಾಗಿ ರುಬ್ಬಿಕೊಳ್ಳಿ. ಬಳಿಕ ಉಳಿದ ಅರ್ಧ ಕಪ್ ಕಾಳನ್ನು ಸ್ವಲ್ವ ರುಬ್ಬಿಕೊಳ್ಳಿ, ನೀರು ಸೇರಿಸಬೇಡಿ. ರುಬ್ಬಿದ ಹಿಟ್ಟನ್ನು ಮಿಶ್ರಣ ಮಾಡುವ ಬಟ್ಟಲಲ್ಲಿ ತೆಗೆದುಕೊಳ್ಳಬೇಕು. ನೀವು ಈ ಹಿಂದೆ ಬಸಿದು ಪಕ್ಕಕ್ಕಿಟ್ಟಿದ್ದ ಅರ್ಧ ಕಪ್ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಹಸಿಮೆಣಸಿನಕಾಯಿ ಪೇಸ್ಟ್, ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಟೀಸ್ಪೂನ್ ಗರಂ ಮಸಾಲ, ಸಣ್ಣಗೆ ಹೆಚ್ಚಿದ ಕರಿಬೇವು, ಈರುಳ್ಳಿ ಪೇಸ್ಟ್ ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ವಡೆಗಳನ್ನು ತಯಾರಿಸಲು ಹಿಟ್ಟು ಗಟ್ಟಿಯಾಗಿರಬೇಕು. ಹಿಟ್ಟು ಸ್ವಲ್ಪ ಜಿಗುಟಾಗಿದ್ದರೆ, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಈಗ, ವಡೆಗಳನ್ನು ಕರಿಯಲು ಡೀಪ್ ಫ್ರೈ ಮಾಡಲು, ಒಲೆಯ ಮೇಲೆ ಕಡಾಯಿ ಇಡಿ ಹಾಗೂ ಸಾಕಷ್ಟು ಎಣ್ಣೆ ಸೇರಿಸಿ ಬಿಸಿ ಮಾಡಬೇಕಾಗುತ್ತದೆ.
ಎಣ್ಣೆ ಬಿಸಿಯಾದ ನಂತರ, ಸ್ವಲ್ಪ ಪ್ರಮಾಣದ ಹಿಟ್ಟನ್ನು ತೆಗೆದುಕೊಂಡು ದುಂಡಗಿನ ಆಕಾರದಲ್ಲಿ ವಡೆಗಳನ್ನು ರೆಡಿ ಮಾಡಿ ಎಣ್ಣೆಗೆ ಬಿಡಬೇಕಾಗುತ್ತದೆ. ಈ ವಡೆಗಳನ್ನು ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
ವಡೆಗಳು ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಬೆಂದ ಬಳಿಕ, ಅವುಗಳನ್ನು ಒಂದು ತಟ್ಟೆಗೆ ತೆಗೆದುಕೊಳ್ಳಿ. ಇದೀಗ ಉಳಿದ ಹಿಟ್ಟಿನಿಂದ ಇದೇ ರೀತಿ ಗರಿಗರಿಯಾದ ವಡೆಗಳನ್ನು ರೆಡಿ ಮಾಡಿಕೊಳ್ಳಬಹುದು.