ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆನ್ಸೆಕ್ಸ್ 3,900 ಪಾಯಿಂಟ್‌ಗಳ ಇಳಿಕೆ ಕಂಡರೆ, ನಿಫ್ಟಿ 50 21,800 ಕ್ಕಿಂತ ಕೆಳಕ್ಕೆ ಇಳಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಸಿಪ್ರೋಕಲ್ ಟ್ಯಾರಿಫ್ ಗಳಿಂದಾಗಿ ಜಾಗತಿಕ ವ್ಯಾಪಾರ ಯುದ್ಧ ಆರಂಭವಾಗಿದ್ದು, ಇದು ವಿಶ್ವದ ಎಲ್ಲ ಷೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿದೆ.
ಮುಂಬೈ ಷೇರುಪೇಟೆ ಬಿಎಸ್ಸಿ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 3,939.68 ಪಾಯಿಂಟ್‌ಗಳಷ್ಟು ಕುಸಿದು 71,425.01 ಕ್ಕೆ ತಲುಪಿದರೆ, ನಿಫ್ಟಿ 1,160.8 ಪಾಯಿಂಟ್‌ಗಳಿಂದ 21,743.65 ಕ್ಕೆ ಕುಸಿದಿದೆ. ಭಾರತೀಯ ಮಾರುಕಟ್ಟೆಯ ಸ್ಟಾಕ್ ಸೂಚ್ಯಂಕಗಳಲ್ಲಿ ಜಾಗತಿಕ ರಕ್ತಪಾತದ ಹಾದಿಯನ್ನು ತುಳಿದಿದೆ.
ಶುಕ್ರವಾರ ವಹಿವಾಟಿನಲ್ಲಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡು ಬಂದಿತ್ತು. ಅದರ ಪ್ರತಿಫಲನ ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸುಮಾರು 20 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ನಿಫ್ಟಿ 50 ಸೂಚ್ಯಂಕವು ಪ್ರಾರಂಭದಲ್ಲಿ ಶೇಕಡಾ 5 ರಷ್ಟು ನಷ್ಟ ಅನುಭವಿಸಿತು. ಇದು ಕೋವಿಡ್ ನಂತರದ ಅತ್ಯಧಿಕ ಕುಸಿತಗಳಲ್ಲಿ ಒಂದಾಗಿದೆ. 1,146.05 ಪಾಯಿಂಟ್ ಇಳಿಕೆಯೊಂದಿಗೆ 21,758.40 ಪಾಯಿಂಟ್‌ಗಳಲ್ಲಿ ಪ್ರಾರಂಭವಾಯಿತು 10;50 ರ ವೇಳೆಗೆ ಮಾರುಕಟ್ಟೆ ತುಸು ಚೇತರಿಕೆ ಕಂಡು 21,974.15ರಲ್ಲಿ ವಹಿವಾಟು ನಡೆಸುತ್ತಿತ್ತು.
ಏತನ್ಮಧ್ಯೆ, ಬಿಎಸ್‌ಇ ಸೆನ್ಸೆಕ್ಸ್ ಶೇಕಡಾ 5.29 ರಷ್ಟು ಕುಸಿದಿದೆ, 3,984.80 ಪಾಯಿಂಟ್‌ಗಳು ಅಥವಾ ಶೇಕಡಾ 5.29 ರಷ್ಟು ಕುಸಿತದೊಂದಿಗೆ 71,379.8 ಕ್ಕೆ ಇಂದಿನ ವಹಿವಾಟು ಪ್ರಾರಂಭವಾಯಿತು. ಟ್ರಂಪ್‌ರ ಘೋಷಣೆಗಳ ನಡುವೆ ಮಾರುಕಟ್ಟೆಗಳು ಈ ಜಾಗತಿಕ ಮಾರಾಟವನ್ನು ತಡೆಯುವಂತೆ ಮಾಡಲು ಸರ್ಕಾರದ ಕಡೆಯಿಂದ ಸುಧಾರಣಾ ಪ್ಯಾಕೇಜ್ ಘೋಷಣೆಯ ಅಗತ್ಯ ಇದೆ ಎನ್ನಲಾಗಿದೆ.