SHOCKING | ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ, ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅತಿಥಿ ಶಿಕ್ಷಕರೊಬ್ಬರನ್ನು ಮಾದನಹಿಪ್ಪರಗಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಶಿವರಾಜ ಹಣಮಂತ (32) ಬಂಧಿತ ಶಿಕ್ಷಕ. 8ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

14 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಾಮುಕ ಅತಿಥಿ ಶಿಕ್ಷಕ ಶಿವರಾಜ್ ಅತ್ಯಾಚಾರ ಎಸಗಿದ್ದಾನೆ. ಅದೇ ಗ್ರಾಮದ ಶಾಲೆಯಲ್ಲಿ ಹಲವು ದಿನಗಳಿಂದ ಶಿವರಾಜ್ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಬಾಲಕಿಯ ತಾಯಿ ಯುಗಾದಿ ಹಬ್ಬಕ್ಕೆ ಮೂವರು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದರು. ಪರೀಕ್ಷೆಯ ಕಾರಣಕ್ಕೆ ಸಂತ್ರಸ್ತೆ ಬಾಲಕಿ ಮನೆಯಲ್ಲಿಯೇ ಉಳಿದಿದ್ದಳು. ಅದೇ ಗ್ರಾಮದಲ್ಲಿನ ಅಜ್ಜಿಯ ಮನೆಗೆ ಹೋಗಿದ್ದ ಬಾಲಕಿ, ಸಂಜೆ ವಾಪಸ್ ಬಂದು ಮನೆಯಲ್ಲಿ ಸ್ನೇಹಿತರ ಜತೆಗೆ ಟಿ.ವಿ. ನೋಡುತ್ತಿದ್ದಳು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಶಿವರಾಜ, ಮನೆಗೆ ನುಗ್ಗಿದನು. ಇದರಿಂದ ಬಾಲಕಿಯ ಸ್ನೇಹಿತರು ಹೆದರಿ ಹೊರಗೆ ಓಡಿಹೋದರು ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಗೆ ನುಗ್ಗಿ ಶಿವರಾಜ್ ಅತ್ಯಾಚಾರ ಎಸಗಿದ್ದ. ಮಾದನಹಿಪ್ಪರಗಾ ಪೊಲೀಸರು ಶಿವರಾಜ್‌ನನ್ನು ಬಂಧಿಸಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯನ್ನು ಪೋಷಕರು ಕಲಬುರಗಿ ನಗರದ ಜಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಎಚ್ಚರವಾದಾಗ ನಡೆದ ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!