ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಯಜುವೇಂದ್ರ ಚಹಾಲ್ ಸೇರಿದಂತೆ ಪ್ರಮುಖರ ದಾಂಪತ್ಯ ಜೀವನ ಬಿರುಕು ಬಿಟ್ಟು ಬೇರೆ ಬೇರೆಯಾಗಿದ್ದಾರೆ. ಇದೀಗ ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಮೇರಿ ಕೋಮ್ ವೈವಾಹಿಕ ಬದುಕು ವಿಚ್ಚೇದನತ್ತ ಸಾಗಿದೆ. ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮೇರಿ ಕೋಮ್ ಹಾಗೂ ಪತಿ ಕೆ ಒನ್ಲರ್ ಇದೀಗ ಬೇರೆ ಬೇರೆಯಾಗಿ ನೆಲೆಸಿದ್ದಾರೆ. ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡ ಹಿನ್ನಲೆಯಲ್ಲಿ ಈಗಾಗಲೇ ಇಬ್ಬರ ಬೇರೆ ಬೇರೆಯಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮೇರಿ ಕೋಮ್ ತನ್ನ ನಾಲ್ವರು ಮಕ್ಕಳೊಂದಿಗೆ ಫರೀದಾಬಾದ್‌ಗೆ ಸ್ಥಳಾಂತರಗೊಂಡಿದ್ದಾರೆ. ಇತ್ತ ಪತಿ ಕೆ ಒನ್ಲರ್ ದೆಹಲಿಯಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ. ಮಾತುಕತೆ, ಸಂಧಾನ ಎಲ್ಲಾ ಪ್ರಕ್ರಿಯೆ ಅಂತ್ಯಗೊಂಡು ಇಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇರಿ ಕೋಮ್ ಹಾಗೂ ಕೆ ಒನ್ಲರ್ ಪ್ರೀತಿಸಿ ಮದುವೆಯಾದವರು. ಇಬ್ಬರಿಗೆ ನಾಲ್ವರು ಮಕ್ಕಳಿದ್ದಾರೆ. ಈ ಅನ್ಯೋನ್ಯ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ಕೆಲ ವರ್ಷಗಳೇ ಉರುಳಿದೆ. ಪ್ರಮುಖ 2022ರ ಬಳಿಕ ಇವರ ಸಂಸಾರದಲ್ಲಿ ಮನಸ್ತಾಪಗಳೇ ಹೆಚ್ಚಾಗಿತ್ತು ಅನ್ನೋದು ಬಯಲಾಗಿದೆ. ಪತಿ ಕೆ ಒನ್ಲರ್ ಸಾಹಸದಿಂದ 2 ರಿಂದ 3 ಕೋಟಿ ರೂಪಾಯಿ ನಷ್ಟವಾಗಿದೆ. ಇಷ್ಟೇ ಅಲ್ಲ ಪತಿ ಹೆಚ್ಚಿನ ಸಮಯವನ್ನು ರಾಜಕೀಯ ಎಂದು ಕಳೆಯಲು ಆರಂಭಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇವೆಲ್ಲಾ ಸಮಸ್ಯೆಗಳು ಮೇರಿ ಕೋಮ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.
ಮೂಲಗಳ ಪ್ರಕಾರ ಮೇರಿ ಕೋಮ್ ಹಾಗೂ ಕೆ ಒನ್ಲರ್ ಇಬ್ಬರು ಬೇರೇ ಬೆರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಧರೆ ಈ ಜೋಡಿ ಕೌಟುಂಬಿಕ ನ್ಯಾಯಾಲದ ಮೆಟ್ಟಿಲು ಹತ್ತಿಲ್ಲ. ಅಧಿಕೃತವಾಗಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿಲ್ಲ. ಈ ಕುರಿತು ಕಾನೂನು ರೀತಿಯ ಚರ್ಚೆ ನಡೆಯುತ್ತಿದು ಎಂದ ಹೇಳಲಾಗುತ್ತಿದೆ.