ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇಕಡಾ 93.90ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ 93.57ರಷ್ಟು ಫಲಿತಾಂಶ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೆನರಾ ಕಾಲೇಜಿನ ದೀಪಶ್ರೀ ವಾಣಿಜ್ಯ ವಿಭಾಗದಲ್ಲಿ ಫಸ್ಟ್ ಬಂದಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಸಂಜನಾಬಾಯಿ ಮೊದಲ ಸ್ಥಾನ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ 600ಕ್ಕೆ 599 ಪಡೆದಿದ್ದಾರೆ. ಇವರ ಜೊತೆಗೆ ದೀಕ್ಷಾ ಕೂಡ ಫಸ್ಟ್ ಸ್ಥಾನದಲ್ಲಿದ್ದಾರೆ.
ಜಿಲ್ಲಾವಾರು ಫಲಿತಾಂಶ ಹೀಗಿದೆ..
ಉಡುಪಿ ಜಿಲ್ಲೆ ಶೇ. 93.90 ದಕ್ಷಿಣ ಕನ್ನಡ ಜಿಲ್ಲೆ ಶೇ. 93.57 ಬೆಂಗಳೂರು ದಕ್ಷಿಣ ಶೇ. 85.36, ಕೊಡಗು ಜಿಲ್ಲೆ ಶೇ. 83.84 ಬೆಂಗಳೂರು ಉತ್ತರ ಶೇ. 83.31 ಉತ್ತರ ಕನ್ನಡ ಜಿಲ್ಲೆ ಶೇ. 82.93 ಶಿವಮೊಗ್ಗ ಜಿಲ್ಲೆ ಶೇ. 79.91 ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 79.70 ಚಿಕ್ಕಮಗಳೂರು ಜಿಲ್ಲೆ ಶೇ.79.56 ಹಾಸನ ಜಿಲ್ಲೆ ಶೇ. 77.56 ಚಿಕ್ಕಬಳ್ಳಾಪುರ ಜಿಲ್ಲೆ ಶೇ.75.80, ಮೈಸೂರು ಜಿಲ್ಲೆ ಶೇ.74.30 ಚಾಮರಾಜನಗರ ಜಿಲ್ಲೆ ಶೇ.73.97 ಮಂಡ್ಯ ಜಿಲ್ಲೆ ಶೇ.73.27 ಬಾಗಲಕೋಟೆ ಜಿಲ್ಲೆ ಶೇ.72.83 ಕೋಲಾರ ಜಿಲ್ಲೆ ಶೇ.72.45 ಧಾರವಾಡ ಜಿಲ್ಲೆ ಶೇ.72.32 ತುಮಕೂರು ಜಿಲ್ಲೆ ಶೇ.72.02 ರಾಮನಗರ ಜಿಲ್ಲೆ ಶೇ. 69.71 ದಾವಣಗೆರೆ ಜಿಲ್ಲೆ ಶೇ.69.45 ಹಾವೇರಿ ಜಿಲ್ಲೆ ಶೇ.76.56, ಬೀದರ್ ಜಿಲ್ಲೆ ಶೇ.67.31 ಕೊಪ್ಪಳ ಜಿಲ್ಲೆ ಶೇ.67.20 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 66.76 ಗದಗ ಜಿಲ್ಲೆ ಶೇ.66.64 ಬೆಳಗಾವಿ ಜಿಲ್ಲೆ ಶೇ.65.37 ಬಳ್ಳಾರಿ ಜಿಲ್ಲೆ ಶೇ.64.41, ಚಿತ್ರದುರ್ಗ ಜಿಲ್ಲೆ ಶೇ.59.87 ವಿಜಯಪುರ ಜಿಲ್ಲೆ ಶೇ.58.81 ರಾಯಚೂರು ಜಿಲ್ಲೆ ಶೇ. 58.75 ಕಲಬುರಗಿ ಜಿಲ್ಲೆ ಶೇ.55.70 ಯಾದಗಿರಿ ಜಿಲ್ಲೆ ಶೇ.48.45ರಷ್ಟು ಫಲಿತಾಂಶ ದೊರೆತಿದೆ.