ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಸರ್ಕಾರ ‘ಜಾಡಮಾಲಿ’ ಪದ ಬಳಸದೆ, ಇದಕ್ಕೆ ಪರ್ಯಾಯವಾಗಿ ‘ಸ್ವಚ್ಛತಾ ಸಹಾಯಕ’ ಎಂಬ ಪದ ಬಳಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ರಾಜ್ಯದ ವಿವಿಧೆಡೆಯ 31 ಠಾಣೆಗಳಲ್ಲಿನ ಜಾಡಮಾಲಿ (SWEEPER) ಪೊಲೀಸ್ ವರ್ಗ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ, ಈ ಪದಕ್ಕೆ ಪರ್ಯಾಯವಾಗಿ ‘ಸ್ವಚ್ಛತಾ ನೌಕರ’ ಎಂಬ ಪದವನ್ನು ಬಳಸುವಂತೆ ನ್ಯಾಯಪೀಠ ಆದೇಶಿಸಬೇಕು ಎಂದು ಕೋರಿದರು.
ಈ ಮನವಿಯನ್ನು ಶ್ಲಾಘಿಸಿದ ನ್ಯಾಯಪೀಠ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುವ ಒಂದು ವರ್ಗದ ನೌಕರರನ್ನು ಉದ್ದೇಶಿಸುವ ಪದ ಗೌರವದಿಂದ ಕೂಡಿರಬೇಕು. ಹೀಗಾಗಿ, ಇನ್ನು ಮುಂದೆ ಸ್ವಚ್ಛತಾ ನೌಕರ ಎಂಬುದಾಗಿಯೇ ಬಳಸಬೇಕು ಎಂದು ಆದೇಶ ಹೊರಡಿಸಿದೆ.