ಮೇಷ
ನಿಮಗಿಂದು ಪೂರಕ ವಾದ ದಿನ. ನಿರ್ಧಾರಗಳು ಉತ್ತಮ ಫಲ ನೀಡುವವು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ಆರ್ಥಿಕ ಉನ್ನತಿ.
ವೃಷಭ
ಸಂಯಮದಿಂದ ಕಾರ್ಯ ನಿರ್ವಹಿಸಿ. ಇಲ್ಲವಾದರೆ ಸಮಸ್ಯೆ ಎದುರಿಸುವಿರಿ. ಇತರರ ಭಾವನೆಗಳಿಗೆ ಸೂಕ್ತ ವಾಗಿ ಸ್ಪಂದಿಸಿ. ಕಡೆಗಣಿಸಬೇಡಿ.
ಮಿಥುನ
ನಿಮ್ಮನ್ನು ಕಾಡುತ್ತಿದ್ದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರುತ್ತಿದೆ. ನಿಮಗೆ ಒಳಿತಾಗುವ ಬೆಳವಣಿಗೆ ಉಂಟಾಗುವುದು. ಕೌಟುಂಬಿಕ ನೆಮ್ಮದಿ.
ಕಟಕ
ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಲು ಕಲಿಯ ಬೇಕು. ಕೌಟುಂಬಿಕವಾಗಿ ಭಾವುಕ ಸನ್ನಿವೇಶ.
ಸಿಂಹ
ವೃತ್ತಿಯಲ್ಲಿ ಸಮಸ್ಯೆ, ಸವಾಲು ಎದುರಿಸುವಿರಿ. ಕಾರ್ಯದಲ್ಲಿ ತಪ್ಪಾದೀತು. ಪ್ರೀತಿಯ ವಿಷಯದಲ್ಲಿ ಮಾತ್ರ ನಿಮಗೆ ಹಿತಕರ ಬೆಳವಣಿಗೆ.
ಕನ್ಯಾ
ನಿಮ್ಮ ಪಾಲಿಗಿಂದು ಕಳೆಗುಂದಿದ ದಿನ. ನೀವು ಯೋಜಿಸಿದ ಕಾರ್ಯ ನಡೆಯದು. ಆರ್ಥಿಕ ಬಿಕ್ಕಟ್ಟು ಸಂಭವ. ಎಲ್ಲರ ಜತೆ ಹೊಂದಾಣಿಕೆ ಇರಲಿ.
ತುಲಾ
ನಿಮ್ಮ ಕೆಲಸದಲ್ಲಿ ತಪ್ಪಾದರೆ ಕೂಡಲೇ ಸರಿಪಡಿಸಿ. ಉದಾಸೀನತೆ ತೋರಿದರೆ ಕಷ್ಟವಾದೀತು. ಹೊಸ ವ್ಯವಹಾರದಲ್ಲಿ ಈಗ ಹೂಡಿಕೆ ಬೇಡ.
ವೃಶ್ಚಿಕ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಆತಂಕ ಮೂಡಿಸಿದ್ದ ವಿಷಯ ಸರಳವಾಗಿ ಪರಿಹಾರವಾಗುವುದು.
ಧನು
ಕಾರ್ಯವು ಸಫಲ ವಾಗಬೇಕಾದರೆ ಸಾಕಷ್ಟು ಯೋಜನೆ ಅವಶ್ಯ. ಆತುರದ ಕ್ರಮ ಒಳಿತು ತರದು. ಭಾವನೆಯನ್ನು ನಿಯಂತ್ರಿಸಿ.
ಮಕರ
ಅಽಕ ಕೆಲಸವು ನಿಮ್ಮ ಮನಶ್ಯಾಂತಿ ಕದಡುವುದು. ಕೆಲವರ ವರ್ತನೆ ಕೂಡ ಅಸಹನೀಯ ಎನಿಸಲಿದೆ. ಸಹನೆಯಿಂದ ವರ್ತಿಸಿರಿ. ಆತುರ ಸಲ್ಲದು.
ಕುಂಭ
ಪಾಸಿಟಿವ್ ಮನಸ್ಥಿತಿ ಯಿಂದ ಕಾರ್ಯವೆಸಗಿ. ಹಿನ್ನಡೆಗಳು ನಿಮ್ಮ ಕೆಲಸಕ್ಕೆ ಅಡ್ಡಿ ತಾರದಿರಲಿ. ಕೆಲವರ ಟೀಕೆಗಳನ್ನು ಕಡೆಗಣಿಸಿರಿ. ಆಶಾವಾದವಿರಲಿ.
ಮೀನ
ಹೆಚ್ಚು ಕೆಲಸ, ಹೆಚ್ಚು ಒತ್ತಡ. ಆತ್ಮೀಯರ ಜತೆಗೆ ಸಂಬಂಧ ಕೆಡಬಹುದು. ಹಣಕ್ಕೆ ಸಂಬಂಧಿಸಿದ ವಿಚಾರ ಚಿಂತೆಗೆ ಕಾರಣವಾಗುವುದು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ