ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ಕಡೆ ಬ್ರೋಕರ್‌ಗಳು ಇರೋದು ಮಾಮೂಲಿ, ಬಟ್ ಇದೀಗ ಸ್ಮಶಾನಕ್ಕೂ ಬ್ರೋಕರ್‌ಗಳು ಎಂಟ್ರಿ ನೀಡಿದ್ದಾರೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು ಎಂದು ಬ್ರೋಕರ್ಸ್ ಡಿಮ್ಯಾಂಡ್ ಮಾಡ್ತಿದ್ದಾರೆ.
ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು.
ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ ಮಂಡಿಯವರು ಹಂಚಿಕೊಂಡಿದ್ದಾರೆ. ಇವರ ಬಳಿಸೌದೆ ಖರೀದಿಸಿದರೆ ಮಾತ್ರ ಜನರಿಗೆ ಸ್ಲಾಟ್ ಸಿಗುತ್ತದೆ. ಸೌದೆ ಬೇಡ ಅಂದರೆ ಇಲ್ಲಿ ಸುಡಲು ಅವಕಾಶವಿಲ್ಲ. ಬ್ರೋಕರ್‌ಗಳೇ ಈ ಶಾಕಿಂಗ್ ವಿಚಾರವನ್ನು ತಿಳಿಸಿದ್ದು, ಸೌದೆ ಬೇಡ ಅಂದರೆ ನೆಲದ ಮೇಲೆ ಸುಡಿ, ಇಲ್ಲದೇ ಇದ್ರೆ ರೋಡಲ್ಲಿ ಸುಡಿ ಎನ್ನುತ್ತಾರೆ ಎನ್ನಲಾಗಿದೆ.