ಸಾಲು ಸಾಲು ರಜೆಗಳ ಖುಷಿಯಲ್ಲಿ ಮನೆ ದಾರಿ ಮರಿಬೇಡ್ರಪ್ಪೋ.. ಬೆಂಗಳೂರಿಗರೇ ಹುಷಾರ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಬೆಂಗಳೂರು ನಿವಾಸಿಗಳು ಮನೆ ಭದ್ರತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಕಳ್ಳತನ, ಅಪರಾಧ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.

ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಮನೆಗೆ ಗುಣಮಟ್ಟದ ಬೀಗ ಅಳವಡಿಕೆ ಮಾಡಿ. ಬೀಗದ ಕೀಯನ್ನು ಮನೆ ಪಕ್ಕ ಎಲ್ಲೋ ಇಡುವ ಅಭ್ಯಾಸ ಬೇಡ. ಇನ್ನು ಮನೆ ಕೆಲಸದವರ ನೇಮಕ ಮಾಡಿಕೊಳ್ಳುವಾಗ ಎಚ್ಚರವಿರಲಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!