ಹೊಸದಿಗಂತ ಹುಬ್ಬಳ್ಳಿ:
ಸ್ನೇಹಿತರೊಂದಿಗೆ ಈಜಲು ಹೋದ ಬಾಲಕನೋರ್ವ ಕೆರೆಯಲ್ಲಿ ಬಿದ್ದು ಮೃತ ಪಟ್ಟ ಘಟನೆ ಉಣಕಲ್ ಕರೆಯಲ್ಲಿ ನಡೆದಿದೆ.
ಬೆಂಗೇರಿಯ ನಿವಾಸಿ ಚೇತನ ಕನಕಣ್ಣವರ(17) ಮೃತ ಬಾಲಕ. ಮಧ್ಯಾಹ್ನ ಸ್ನೇಹಿತರೊಂದಿಗೆ ಈಜಲೂ ಹೋಗಿದ್ದಾನೆ. ಈಜು ಬಾರದಿರುವುದರಿಂದ ಕೆರೆಯಲ್ಲಿ ಮುಳುಗಿದ್ದ. ಅವನ ಜೊತೆಯಲ್ಲಿದ್ದ ಸ್ನೇಹಿತರು ಪೊಲೀಸ್ ಹಾಗೂ ಅವನ ಪೋಷಕರಿಗೆ ತಿಳಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಬುಧವಾರ ಇಡೀ ದಿನ ಶೋಧ ಕಾರ್ಯ ಮಾಡಿತ್ತು. ಗುರುವಾರ ಬೆಳಿಗ್ಗೆ ಮೃತ ದೇಹ ಸಿಕ್ಕಿದೆ. ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.