ಹೊಸದಿಗಂತ ವಿಜಯನಗರ:
ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಪರಾರಿಯಾಗಲು ಬಯತ್ನಿಸಿದ ಕೋಲೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಆರೋಪಿ ಕಾಳಿ ಅಲಿಯಾಸ್ ಕಾಳಿದಾಸ್(30) ಗುಂಡೇಟಿಗೆ ಒಳಗಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಕಾಳಿದಾಸ ಇಬ್ಬರು ಪೊಲೀ ಸ್ ಪರದೆಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ.
ಘಟನೆ ಹಿನ್ನೆಲೆ:
ಹಳೇ ದ್ವೇಷದಿಂದ ವನ್ನೂರುವಲಿ ಎಂಬಾತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಕಾಳಿದಾಸನನ್ನು ಪೊಲೀಸರು ತಡ ರಾತ್ರಿ ಬಂಧಿಸಿದ್ದರು. ಕೃತ್ಯದ ತಪ್ಪೊಂಪಿಕೊಂಡ ಕಾಳಿದಾಸ ಹತ್ಯೆಗೆ ಬಳಕೆ ಮಾಡಿರುವ ಮಾರಕಾಸ್ತ್ರವನ್ನು ಚಿತ್ತವಾಡಗಿ ರೈಲ್ವೇ ಹಳಿ ಬಳಿ ಬಚ್ಚಿಟ್ಟಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದ.
ಅದನ್ನು ವಶಪಡಿಸಿಕೊಳ್ಳಲು ಗುರುವಾರ ಬೆಳಗಿನ ಜಾವ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಾಗ ಅದೇ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇಬ್ಬರು ಪೇದೆಗಳು ಗಾಯಹೊಂಡಿದ್ದು, ಆತ್ಮರಕ್ಷಣೆಗಾಗಿ ಗ್ರಾಮೀಣ ಠಾಣೆ ಪಿಐ ಹುಲಗಪ್ಪ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಎಸ್ಪಿ ಶ್ರೀಹರಿ ಬಾಬು ಮಾಹಿತಿ ನೀಡಿದರು.