ಜುಣಕ ಉತ್ತರ ಕರ್ನಾಟಕದ ಜನಪ್ರಿಯ ಅಡುಗೆ. ಬೇಸಿಕ್ ಪದಾರ್ಥಗಳಲ್ಲಿ ತಯಾರಾಗುವ ಈ ಖಾರದ ಪಲ್ಯ, ಅತಿಥಿಗಳಿಗೆ ತಕ್ಷಣ ತಯಾರಿಸಿ ನೀಡಬಹುದು.
ಬೇಕಾಗುವ ಪದಾರ್ಥಗಳು:
ಕಡಲೆ ಹಿಟ್ಟು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀಸ್ಪೂನ್
ಮೆಣಸಿನ ಕಾಯಿ – 2-3
ಇಂಗು – ಒಂದು ಚಿಟಿಕೆ
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಹಸಿಮೆಣಸು – 2
ಕರಿಬೇವು – 8-10 ಎಲೆಗಳು
ಉದ್ದಿನ ಬೇಳೆ – 1 ಟೀಸ್ಪೂನ್
ನೀರು – 1 ½ ಕಪ್
ಕೊತ್ತಂಬರಿ ಸೊಪ್ಪು – ಬೇಕಾದಷ್ಟು
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವು, ಇಂಗು ಹಾಕಿ ಒಂದು ನಿಮಿಷ ಫ್ರೈ ಮಾಡಿ. ಅದಕ್ಕೆಈಗ ನೀರು ಸೇರಿಸಿ, ಉಪ್ಪು ಹಾಕಿ ಕುದಿಯಲು ಬಿಡಿ.
ನೀರು ಕುದಿಯುತ್ತಿದ್ದಂತೆ ಉರಿ ಕಡಿಮೆ ಮಾಡಿ ಕಡಲೆ ಹಿಟ್ಟು ಹಾಕಿ ನಿಧಾನವಾಗಿ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಗಂಟಾಗದಂತೆ ಚನ್ನಾಗಿ ಕಲಸಿಕೊಳ್ಳಬೇಕು. ಹಿಟ್ಟು ಗಟ್ಟಿಯಾಗುತ್ತಿದಂತೆ ಬಾಣಲೆಯ ತಳ ಬಿಟ್ಟುಕೊಳ್ಳುತ್ತದೆ. ಈಗ ಕೊತ್ತಂಬರಿ ಸೊಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಜುಣಕ ರೆಡಿ.