ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರು ಜನಾಕ್ರೋಶ ಯಾತ್ರೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಹೋರಾಟ ನಿಲ್ಲಿಸಿ ಎನ್ನಲ್ಲ ನಾನು, ಜನಾಕ್ರೋಶ ಯಾತ್ರೆಯನ್ನು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಮಾಡಿ. ಇದೇ 17ರಂದು ನಾವೂ ಕೂಡ ಜನಾಕ್ರೋಶ ಯಾತ್ರೆ ಮಾಡ್ತೇವೆ, ನಮ್ಮ ಸಿಎಂ ಸಿದ್ದರಾಮಯ್ಯ ನೇತ್ರತ್ವದಲ್ಲಿ ಮಾಡ್ತೇವೆ. ಸುಜ್ರೇವಾಲ ಅವರು ಇರ್ತಾರೆ. ನಾನು ಭಾಗಿಯಾಗ್ತೇನೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡ್ತೇವೆ, ಸರ ಬಿಡಿ ಮಾಂಗಲ್ಯ ತೆಗೆದುಕೊಳ್ಳೊಕೆ ಆಗಲ್ಲ ಈಗ ಅಮೇರಿಕಾದ ನಿರ್ಧಾರದ ಬಗ್ಗೆ ಯಾಕೆ ಮಾತಾಡ್ತಿಲ್ಲ, ಫಾರಿನ್ ಪಾಲೀಸಿ ಬಗ್ಗೆ ಮಾತಾಡ್ತಿಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮಾಡ್ತೇವೆ ಎಂದರು.