ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ (ಡಿಪಿಡಿಪಿ) ಸೆಕ್ಷನ್ 44 (3) ಅನ್ನು ರದ್ದುಗೊಳಿಸುವಂತೆ ‘ಇಂಡಿಯಾ’ ಒಕ್ಕೂಟ ಆಗ್ರಹಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಗೌರವ್ ಗೊಗೋಯಿ ಮಾತನಾಡಿ, ‘ಡಿಪಿಡಿಪಿ ಕಾಯ್ದೆಯ ಸೆಕ್ಷನ್ 44 (3) ಅನ್ನು ರದ್ದುಗೊಳಿಸಲು ಕೋರಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಒಕ್ಕೂಟದ 120 ಸಂಸದರು ಮನವಿ ಪತ್ರಕ್ಕೆ ಸಹಿ ಮಾಡಿದ್ದೇವೆ.
2023ರಲ್ಲಿ ಕಾಯ್ದೆ ಅಂಗೀಕಾರಗೊಂಡಿತ್ತು. ಅದಕ್ಕೂ ಮುನ್ನ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲಿಸಿತ್ತು. ಆ ಸಮಿತಿಯಲ್ಲಿ ನಾನೂ ಇದ್ದೆ. ಪರಿಶೀಲನೆ ವೇಳೆ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1) (ಜೆ)ಗೆ ಪರ್ಯಾಯವಾಗಿ, ಡಿಪಿಡಿಪಿಯಲ್ಲಿ ಸೆಕ್ಷನ್ 44 (3) ಅನ್ನು ಸೇರಿಸುವ ಯಾವುದೇ ಪ್ರಸ್ತಾಪ ಇರಲಿಲ್ಲ. ಆದರೆ, ವಿಧೇಯಕಕ್ಕೆ ಅನುಮೋದನೆ ನೀಡುವಾಗ ಕೊನೆಯ ಹಂತದಲ್ಲಿ ಸರ್ಕಾರ ಈ ಬದಲಾವಣೆ ತಂದಿದೆ.