ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಮೊದಲ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಈ ಮಧ್ಯೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಆರ್‌ಸಿಬಿ ತಂಡದ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಐಪಿಎಲ್ ಆರಂಭವಾಗಿ 18 ವರ್ಷಗಳಾಗಿವೆ. 18 ವರ್ಷದಲ್ಲಿ ಏನೇ ಆಡಲಿ ಆರ್‌ಸಿಬಿ ಕಂಡ್ರೆ ಒಂದು ರೀತಿ ಜೋಶ್, ಉತ್ಸಾಹ. ಅದೇನೋ ಗೊತ್ತಿಲ್ಲ, ಆರ್‌ಸಿಬಿ ಅಂದ್ರೆ ಜೀವ. ಬಹುಶಃ ಅದು ಬೆಂಗಳೂರನ್ನು ಪ್ರತಿನಿಧಿಸುತ್ತೆ. ಅದು ನಮ್ಮ ಭಾಷೆ, ಸಂಸ್ಕೃತಿ ಬಿಂಬಿಸುತ್ತೆ. ಆರ್‌ಸಿಬಿ ಯಾವಾಗ ಆಡಿದ್ರೂ ಸರಿ ಒಂದು ಜೋಶ್‌ನಲ್ಲಿ ಆಡ್ತಾರೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ನೀವು ಸ್ಟೇಡಿಯಂಗೆ ಹೋಗಿ ಎಂಜಾಯ್ ಮಾಡಿ ಆರ್‌ಸಿಬಿ ತಂಡವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.