ಹೊಸದಿಗಂತ ವರದಿ, ದಾವಣಗೆರೆ
ಮದ್ಯ ಸೇವನೆಗೆ ಹಣ ಕೊಡದ ತಾಯಿಯನ್ನು ಮಗನೊಬ್ಬ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಐಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಗ್ರಾಮದ ರತ್ನಬಾಯಿ(62 ವರ್ಷ) ಕೊಲೆಯಾದ ಮಹಿಳೆ. ಅನಾರೋಗ್ಯಪೀಡಿತ ತಾಯಿ ರತ್ನಬಾಯಿ ಬಳಿ ಮಗ ರಾಘವೇಂದ್ರ ನಾಯ್ಕ ಮದ್ಯ ಸೇವನೆಗೆ ಹಣ ಕೊಡುವಂತೆ ಪೀಡಿಸಿದ್ದಾನೆ. ತಾಯಿ ಹಣ ಕೊಡದ ಕಾರಣ ಕೋಪಕೊಂಡು ರಾಘವೇಂದ್ರ ನಾಯ್ಕ ಕೋಲಿನಿಂದ ಮುಖಕ್ಕೆ ಬಲವಾಗಿ ಹೊಡೆದಿದ್ದು, ಇದರಿಂದ ತಾಯಿ ರತ್ನಬಾಯಿ ಮೃತಪಟ್ಟಿದ್ದಾರೆ. ರಾಘವೇಂದ್ರ ನಾಯ್ಕ ಪತ್ನಿ ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿರುವ ತಮ್ಮ ತಂದೆ ಮನೆಗೆ ಜಾತ್ರೆಗೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.