ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಆರ್ಸಿಬಿ ನೀಡಿದ ಕೇವಲ 163 ರನ್ಗಳ ಟಾರ್ಗೆಟ್ ಬೆನ್ನು ಹತ್ತಿದ ಡೆಲ್ಲಿ ಆರಂಭದಲ್ಲಿ ಮುಗ್ಗರಿಸಿತು.
ಆದರೆ, ಕನ್ನಡಿಗ ಕೆಎಲ್ ರಾಹುಲ್ ಎಚ್ಚರಿಕೆಯ ಆಟದಿಂದ ಡೆಲ್ಲಿಗೆ ಗೆಲುವು ಸಿಕ್ಕಿತು. ಕೇವಲ 53 ಬಾಲ್ಗಳಲ್ಲಿ 93 ರನ್ ಸಿಡಿಸಿದ ರಾಹುಲ್ ಡೆಲ್ಲಿಗೆ ಆಸರೆ ಆದರು. ವಿನ್ ಆದ ಬಳಿಕ ಕೆಎಲ್ ರಾಹುಲ್ ಅವರು ಮಾಡಿದ ಸೆಲೆಬ್ರೇಷನ್ ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆ.ಎಲ್. ರಾಹುಲ್ ಕನ್ನಡದವರು. ನಮ್ಮ ಬೆಂಗಳೂರಿದು, ಈ ಊರು ನನ್ನ ಹೃದಯದಲ್ಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟ್ ಮೂಲಕ ಸರ್ಕಲ್ ಒಂದನ್ನು ಬರೆದು ಇದು ನನ್ನ ಟೆರಿಟರಿ ಎಂದು ಮಾರ್ಕ್ ಮಾಡಿದ್ದಾರೆ. ಬೆಂಗಳೂರಿನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸೋಲಿಸಿ ರಾಹುಲ್ ಇದು ನನ್ನೂರು ಎಂದು ಗರ್ವದಿಂದ ಹೇಳಿದ್ದಾರೆ.
Have you ever seen this aggressive #KLRahul ? He just made a STATEMENT! 🔥#RCBvDC pic.twitter.com/KM6ZJmx9UF
— Shilpa (@shilpa_cn) April 10, 2025