ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಖದೀಮರು ಫೇಸ್ಬುಕ್ನಲ್ಲಿ ಪೊಲೀಸ್ ಆಯುಕ್ತ ಬಿ ದಯಾನಂದ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿದ್ದಾರೆ.
ವಂಚಕರು ಜನರಿಗೆ ದಯಾನಂದ್ ಅವರ ಹೆಸರಿನ ಅಕೌಂಟ್‌ನಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಇನ್ನು ಹಲವರು ಇದನ್ನು ನಿಜ ಎಂದು ನಂಬಿ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಬಿ.ದಯಾನಂದ್ ಅವರ ಹೆಸರಿನಲ್ಲೇ ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆದಿದ್ದ ಖದೀಮರು ವಂಚನೆಗೆ ಮುಂದಾಗಿದ್ದರು. ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆದಿದ್ದ ಖದೀಮರು ಪೊಲೀಸ್ ಕಮಿಷನರ್ ಪೋಟೋವನ್ನು ವಾಟ್ಸ್ ಆ್ಯಪ್ ಡಿಪಿಗೆ ಹಾಕಿದ್ದರು ಎನ್ನಲಾಗಿದೆ.