ತೆರಿಗೆ ಹೆಚ್ಚಳಕ್ಕೆ ತಡೆ ನೀಡಿದ ಟ್ರಂಪ್ : ಚೀನಾಗಿಲ್ಲ ವಿನಾಯಿತಿ, ಇದರ ಹಿಂದಿದ್ಯಾ ತಂತ್ರಗಾರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳಿಗೆ ಟ್ರಂಪ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತೆರಿಗೆ ಹೆಚ್ಚಳ ಜಾರಿಗೆ ಬರಬೇಕಿದ್ದ ದಿನವೇ ತೆರಿಗೆಯನ್ನು 90 ದಿನಗಳ ಮಟ್ಟಿಗೆ ತಡೆಹಿಡಿದು 75 ದೇಶಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಆದರೆ ಚೀನಾಗೆ ಈ ವಿನಾಯಿತಿ ನೀಡದೆ, ಶೇ .125 ತೆರಿಗೆಯನ್ನು ಅಮೆರಿಕ ವಿಧಿಸಿದೆ. ಚೀನಾ ಮೇಲಿನ ತೆರಿಗೆ ಹೆಚ್ಚಳಕ್ಕೆ , ಅದನ್ನು ಆರ್ಥಿಕವಾಗಿ ಪ್ರತ್ಯೇಕಿಸುವುದರ ಜೊತೆಗೆ , ಕೆಲವೈಯಕ್ತಿಕ ಹಾಗೂ ವ್ಯೂಹಾತ್ಮಕಕಾರಣಗಳೂ ಇವೆ ಎನ್ನಲಾಗಿದೆ.

ಚೀನಾ ಅಮೆರಿಕದಲ್ಲಿ ಕಡಿಮೆ ಬೆಲೆ ವಸ್ತುಗಳನ್ನು ರಾಶಿ ಹಾಕುವುದು , ದೇಶದ ಬೌದ್ಧಿಕ ಆಸ್ತಿಯನ್ನು ದೋಚುವುದು ಟ್ರಂಪ್‌ಗೆ ಸರಿ ಎಣಿಸುತ್ತಿಲ್ಲ. ಇದರಿಂದ ಅಮೆರಿಕದ ಕಂಪನಿಗಳನ್ನು ರಕ್ಷಿಸುವುದು ಮತ್ತು ಮಾತುಕತೆಗೆ ಬರುವಂತೆ ಚೀನಾವನ್ನು ಒತ್ತಾಯಿಸುವುದೂ ತೆರಿಗೆ ಹೆಚ್ಚಳದ ಉದ್ದೇಶವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!