ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಇನ್ನೊಂದು ಬಿಗ್ ಬಜೆಟ್ ಸಿನಿಮಾಗೆ ಸಹಿ ಮಾಡಿದ್ದಾರೆ. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಹಾಗೂ ಡಯಾನಾ ಪಿಂಟಿ ಅಭಿನಯದ ಕಾಕ್‌ಟೇಲ್ ಸಿನಿಮಾದ ಸೀಕ್ವೆಲ್‌ಗೆ ರಶ್ಮಿಕಾ ಆಯ್ಕೆಯಾಗಿದ್ದಾರೆ.
ಈ ಸಿನಿಮಾಕ್ಕೆ ಶಾಹಿದ್ ಕಪೂರ್ ಹೀರೋ ಆಗಿದ್ದು, ಕ್ರಿತಿ ಸೆನೊನ್ ಹಾಗೂ ರಶ್ಮಿಕಾ ಇಬ್ಬರು ಸ್ಕ್ರೀನ್ ಶೇರ್ ಮಾಡಲಿದ್ದಾರೆ. ದಿನೇಶ್ ವಿಜ್ಞಾನ್ ನಿರ್ಮಾಣದ ‘ಕಾಕ್‌ಟೈಲ್ 2’ಗೆಲವ್ ರಂಜನ್ ಕಥೆ ಬರೆದಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನ ಮಾಡಲಿದ್ದಾರೆ.
ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಅಂತ್ಯದೊಳಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಸದ್ಯ ರಶ್ಮಿಕಾ ಒಪ್ಪಿಕೊಂಡಿರೋ ಸಿನಿಮಾ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.