ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ನಮ್ಮ ಹೆಮ್ಮೆ, ಇಲ್ಲಿ ಬಡವ, ಮಧ್ಯಮ, ರಿಚ್ ಎಲ್ಲರಿಗೂ ಜಾಗ ಇದೆ. ಜೀವನ ಮಾಡೋಕೆ ಬೇಕಾದ ಎಲ್ಲವೂ ಸಿಗುತ್ತದೆ. ಬಾಡಿಗೆಗೆ ಗುಡಿಸಲು ಕೂಡ ಸಿಗುತ್ತದೆ. ಹಾಗೂ ಐಶಾರಾಮಿ ಬಂಗಲೆ ಕೂಡ. ಬಟ್ ಬೆಂಗಳೂರು ಸೈಲೆಂಟ್ ಆಗಿ ನಮ್ಮ ಸೇವಿಂಗ್ಸ್‌ನ್ನು ಖಾಲಿ ಮಾಡ್ತಾ ಇದೆ ಅನ್ನೋ ವಿಚಾರ ನಿಮ್ಮ ತಲೆಗೆ ಬಂದಿದ್ಯಾ?
ಈ ಉದ್ಯಮಿ ಪೋಸ್ಟ್ ಓದಿ ನೋಡಿ, ಯೋಚನೆ ಬಂದರೂ ಬರಬಹುದು. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ಉದ್ಯಮಿ ಹರೀಶ್ ಎನ್ಎ ಎಂಬುವವರು ರಾಜ್ಯದಲ್ಲಿ ಹೆಚ್ಚುತ್ತಿರುವ ದರ ಏರಿಕೆ ಕುರಿತಾಗಿ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜನರು ಕಷ್ಟಪಟ್ಟು ಉಳಿತಾಯ ಮಾಡಿರುವ ತಮ್ಮ ಹಣ, ದೈನಂದಿನ ಖರ್ಚು ವೆಚ್ಚಗಳಿಗೆ ಸದ್ದಿಲ್ಲದೆ ಖಾಲಿಯಾಗುತ್ತಿರುವ ಬಗ್ಗೆ ಅವರು ವಿವರಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಕೈಗೆಟುಕುವಂತಿಲ್ಲ, ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸದ್ದಿಲ್ಲದೆ ತಿನ್ನುತ್ತಿದೆ. ಇದನ್ನು ನೀವು ಅನುಭವಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮಾರ್ಚ್ 7ರಂದು ನಂದಿನಿ ಹಾಲಿನ ಬೆಲೆ ಲೀಟರ್‌ಗೆ 4 ರೂ ಏರಿಕೆಯಾಗಿದ್ದು, 47 ರೂ ತಲುಪಿದೆ. ಮಾರಾಟ ತೆರಿಗೆ ಹೆಚ್ಚಳದಿಂದಾಗಿ ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಲೀಟರ್‌ಗೆ 2 ರೂ ಏರಿಕೆಯಾಗಿದೆ.
ಫೆಬ್ರವರಿ 9ರಂದು ನಮ್ಮ ಮೆಟ್ರೋ ದರವನ್ನು ಗರಿಷ್ಠ ದರ 60 ರಿಂದ 90 ರೂ ಕ್ಕೆ ಏರಿಕೆ ಮಾಡಲಾಗಿದೆ. ಆ ಮೂಲಕ ಇದು ಭಾರತದ ಅತ್ಯಂತ ದುಬಾರಿ ಮೆಟ್ರೋ ಆಗಿದೆ. ಸಾರ್ವಜನಿಕ ಸಾರಿಗೆ, ವಿದ್ಯುತ್, ಕಸಕ್ಕೆ ತೆರಿಗೆ ಮತ್ತು ಕಾಫಿ ಪುಡಿಯ ಬೆಲೆ ಕೂಡ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ವೈಟ್‌ಫೀಲ್ಡ್ ಅಥವಾ ಕೋರಮಂಗಲದಲ್ಲಿ 2ಬಿಹೆಚ್ಕೆ ಮನೆಗೆ ತಿಂಗಳಿಗೆ 40 ಸಾವಿರ ರೂ ಆಗಿದ್ದು, ಒಂದು ವರ್ಷದ ಹಿಂದೆ ಕೇವಲ 25 ಸಾವಿರ ರೂ ಇತ್ತು. ಪೀಕ್ ಅವರ್ನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ. ಹೆಬ್ಬಾಳ ಸಂಚಾರ ದಟ್ಟಣೆಯ ತಾಣವಾಗಿದೆ ಎಂದಿದ್ದಾರೆ.
ನಿತ್ಯ ಒಂದಿಲ್ಲೊಂದು ದರ ಏರಿಕೆ ಆಗುತ್ತಿದ್ದರೂ, ಸಂಬಳ ಮಾತ್ರ ಹಾಗೇ ಇದೆ. ಐಟಿ ಕ್ಷೇತ್ರದಲ್ಲಿ ದರ ಏರಿಕೆ ಪ್ರಮಾಣ ಅಷ್ಟೇನೂ ಮೀರಿಸುವುದಿಲ್ಲ. ಆದರೆ ಎರಡನೇ ಅಥವಾ ಮೂರನೇ ಹಂತದ ನಗರಗಳಲ್ಲಿ ಕೆಲಸ ಮಾಡುವ ಹೊಸಬರಿಗೆ ಇದು ಹೊರೆಯಾಗಲಿದೆ. ಪಿಜಿ ಬಾಡಿಗೆ, ಆಹಾರ ಮತ್ತು ಪ್ರಯಾಣ ಸೇರಿದಂತೆ ಇತರೆ ವಿಚಾರಕ್ಕೆ ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.