ಮಾನಸಿಕ ಆರೋಗ್ಯ ಎಲ್ಲರಿಗೂ ಮಹತ್ವಪೂರ್ಣವಾದ ವಿಷಯವಾಗಿದ್ದರೂ, ಕೆಲವು ಸಂದರ್ಭದಲ್ಲಿ ಮಹಿಳೆಯರಿಗೆ ಮಾನಸಿಕವಾಗಿ ವಿಶಿಷ್ಟ ಸವಾಲುಗಳು ಎದುರಾಗುತ್ತವೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳ ಸಂಯೋಗದಿಂದಾಗಿ ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಹಲವು ರೀತಿಯಾಗಿ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿಶೇಷ ಗಮನ ಮತ್ತು ಸಹಾಯದ ಅಗತ್ಯವಿದೆ.
ಹಾರ್ಮೋನು ಬದಲಾವಣೆಗಳು:
ಋತುಚಕ್ರ, ಗರ್ಭಾವಸ್ಥೆ, ಹೆರಿಗೆಯ ನಂತರದ ಕಾಲ ಮತ್ತು ಮೆನೋಪಾಸ್ ಇತ್ಯಾದಿಗಳಲ್ಲಿ ನಡೆಯುವ ಹಾರ್ಮೋನು ಬದಲಾವಣೆಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ಪ್ರೀ-ಮೆನ್ಸ್ಟ್ರುಯಲ್ ಸಿಂಡ್ರೋಮ್ (PMS) ಮತ್ತು PMDD:
ಕೆಲ ಮಹಿಳೆಯರಿಗೆ ಋತುಚಕ್ರದ ಅವಧಿಯಲ್ಲಿ ತೀವ್ರವಾಗಿ ಬೇಸರ, ಕೋಪದ ಅನುಭವವಾಗಬಹುದು. ಇದು “ಪ್ರೀಮೆನ್ಸ್ಟ್ರುಯಲ್ ಡಿಸ್ಫೋರಿಕ್ ಡಿಸಾರ್ಡರ್” ಎಂಬ ಗಂಭೀರ ರೂಪವೂ ಇರಬಹುದು.
ಸಾಮಾಜಿಕ ಒತ್ತಡಗಳು:
ಗೃಹ ಮತ್ತು ಉದ್ಯೋಗದ ಜವಾಬ್ದಾರಿಗಳ ನಡುವೆ ಸಮತೋಲನ ಸಾಧಿಸಲು ಹೋರಾಟ, ಲೈಂಗಿಕ ಅಸಮಾನತೆ, ಕುಟುಂಬದ ನಿರೀಕ್ಷೆಗಳು ಇವು ಮಾನಸಿಕ ಒತ್ತಡ ಹೆಚ್ಚಿಸಬಹುದು.
ಗರ್ಭಾವಸ್ಥೆ ಮತ್ತು ಹೆರಿಗೆಯ ನಂತರದ ಮನೋಸ್ಥಿತಿ:
ಹೆರಿಗೆಯ ನಂತರ “ಪೋಸ್ಟ್‌ಪಾರ್ಟಮ್ ಡಿಪ್ರೆಶನ್” ಎಂಬುದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಇದು ಮಗುವಿನ ಆರೈಕೆಗೂ ಅಡಚಣೆಯುಂಟುಮಾಡಬಹುದು.
ಲೈಂಗಿಕ ಶೋಷಣೆ:
ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಮತ್ತು ಗೃಹಹಿಂಸೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ದೀರ್ಘಕಾಲದ ಮಾನಸಿಕ ಗಾಯಗಳು ಮನಸ್ಸಿಗೆ ಉಂಟಾಗಬಹುದು.