ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಫ್ಲಿಪ್ಕಾರ್ಟ್, ಅಮೆಜಾನ್ ಮತ್ತಿತರ ಇ-ಕಾಮರ್ಸ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಸಲುವಾಗಿ ರಾಜ್ಯ ಸಚಿವ ಸಂಪುಟಗಿಗ್ ವರ್ಕರ್ಸ್ ವಿಧೇಯಕಕ್ಕೆ ತೀರ್ಮಾನ ಕೈಗೊಂಡಿದೆ. ಸುಗ್ರೀವಾಜ್ಞೆ ಮೂಲಕ ಗಿಗ್ ವರ್ಕರ್ಸ್ ಜಾರಿಗೆ ತೀರ್ಮಾನಿಸಿದೆ.
ಜೀವನ ನಿರ್ವಹಣೆಗೆ ಯಾವುದೇ ಭದ್ರತೆ ಇಲ್ಲದೆ ದುಡಿಯುವ ಗಿಗ್ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದು, ಅವರ ಸಲಹೆ ಮೇರೆಗೆ ಮಂಡಳಿ ರಚನೆ ಮಾಡಲಾಗುತ್ತಿದೆ. ಇ -ಕಾರ್ಮಸ್, ಪ್ಲಾಟ್ ಫಾರಂ ಆಧಾರಿತ ಕಂಪನಿಗಳಿಂದ ಶೇಕಡ 5ರಷ್ಟು ಸೆಸ್ ಸಂಗ್ರಹಿಸಿ ರಾಜ್ಯ ಸರ್ಕಾರದ ಪಾಲು ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲಾಗುವುದು. ಈ ನಿಧಿಯನ್ನು ಬಳಕೆ ಮಾಡಿ ಗಿಗ್ ಕಾರ್ಮಿಕರಿಗೆ ಭದ್ರತೆ ಕಲ್ಪಿಸುವ ಜೊತೆಗೆ 8 ಅಂಶಗಳನ್ನು ಆಧರಿಸಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು.