ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ತನ್ನ ಪತ್ನಿಯನ್ನು ಕೊಂದು ಚರಂಡಿಗೆಸೆದ ಘಟನೆ ದೆಹಲಿಯ ದ್ವಾರಕಾದ ಚಾವ್ಲಾ ಪ್ರದೇಶದಲ್ಲಿ ನಡೆದಿದೆ.ಆದ್ರೆ 15 ದಿನಗಳ ಬಳಿಕ ಆಕೆಯ ಮೂಗುತಿಯ ಮೂಲಕ ಪೊಲೀಸರು ಗುರುತನ್ನು ಪತ್ತೆಹಚ್ಚಿದ್ದಾರೆ.
ಮಾ.15 ರಂದು ಸೀಮಾ ಸಿಂಗ್ (47) ಎಂಬ ಮಹಿಳೆಯ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಆದರೆ 15 ದಿನ ಕಳೆದರೂ ಆಕೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ತನಿಖಾಧಿಕಾರಿಗಳು ಆಕೆ ಹಾಕಿಕೊಂಡಿದ್ದ ಮೂಗುತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾಗ ಸತ್ಯ ಹೊರಬಂದಿದೆ.
ತನಿಖಾಧಿಕಾರಿಗಳು ಮೂಗುತಿ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿ, ಖರೀದಿದಾರರ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಸಂಪರ್ಕಕ್ಕೆ ಸಿಕ್ಕ ದೆಹಲಿ ಉದ್ಯಮಿಯನ್ನು ವಿಚಾರಿಸಿದಾಗ ನನ್ನ ಪತ್ನಿ ವೃಂದಾವನಕ್ಕೆ ಹೋಗಿರುವುದಾಗಿ ತಿಳಿಸಿದ್ದಾನೆ.ಬಳಿಕ ತನಿಖೆ ತ್ರೀವಗೊಂಡಾಗ ಉದ್ಯಮಿ ತಪ್ಪೊಪ್ಪಿಕೊಂಡಿದ್ದು, ತನ್ನ ಪತ್ನಿಯನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಬಂಧಿಸಿದ್ದಾರೆ.