ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಗಳ ಗಳಿಸಿದೆ.
ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು.
ಬ್ಯಾಟಿಂಗ್ಗೆ ಬಂದ ರಚಿನ್ ರವೀಂದ್ರ (4) ಹಾಗೂ ಡಿವೋನ್ ಕಾನ್ವೆ (12) ತಂಡದ ಮೊತ್ತ 16 ರನ್ ಇರುವಾಗಲೇ ಔಟ್ ಆದರು.
ರಾಹುಲ್ ತ್ರಿಪಾಠಿ 16 ರನ್ ಗಳಿಸಿ ಆಡುವಾಗ ಸುನಿಲ್ ನರೈನ್ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ರನ್ಗಳಿಂದ ಆಡುವಾಗ ವರುಣ್ ಚಕ್ರವರ್ತಿ ಬ್ರೇಕ್ ಹಾಕಿದರು. ಆರ್ ಅಶ್ವಿನ್ ಅವರು ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ನಡೆದರು. ಆಲ್ರೌಂಡರ್ ಜಡೇಜಾ ಹಾಗೂ ದೀಪಕ್ ಹೂಡಾ ಈ ಇಬ್ಬರು ಡಕೌಟ್ ಆದರು .
ಚೆನ್ನೈ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರು 10ನೇ ಬ್ಯಾಟ್ಸ್ಮನ್ ಆಗಿ ಕ್ರೀಸ್ಗೆ ಆಗಮಿಸಿದರು.ಆದ್ರೆ 1 ರನ್ಗೆ ಹೊರ ನಡೆದು ಫ್ಯಾನ್ಸ್ಗೆ ನಿರಾಸೆ ಮೂಡಿಸಿದರು. ನೂರ್ ಅಹ್ಮದ್ ಕೂಡ 1 ರನ್ಗೆ ಕ್ಯಾಚ್ ಕೊಟ್ಟರು. ತಂಡದಲ್ಲಿ ಶಿವಂ ದುಬೆ ಅವರ 31 ರನ್ಗಳನ್ನು ಬಿಟ್ಟರೇ ಉಳಿದ ಯಾವ ಬ್ಯಾಟ್ಸ್ಮನ್ ಕೂಡ ಈ ರನ್ಗಳ ಗಡಿ ಸನಿಹಕ್ಕೂ ಬರಲಿಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 104 ರನ್ಗಳ ಟಾರ್ಗೆಟ್ ಅನ್ನು ರಹಾನೆ ಪಡೆಗೆ ನೀಡಿದೆ.