ರಸ್ತೆಯಲ್ಲಿ ಹೋಗುವಾಣ ಹಣ ಸಿಕ್ಕರೆ ಏನು ಮಾಡಬೇಕು? ಇದು ನಿಮಗೇ ಸಿಕ್ಕಿದ್ದು ಯಾಕೆ ಗೊತ್ತಾ?

ರಸ್ತೆಯಲ್ಲಿ ಹಣ ಸಿಗೋದು ಕಾಮನ್‌ ವಿಷಯ ಅಲ್ಲ. ಎಲ್ಲರೂ ತಮ್ಮ ಹಣವನ್ನು ಎಲ್ಲಕ್ಕಿಂತ ಹೆಚ್ಚು ಜಾಗ್ರತೆ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ದುಡ್ಡು ನೆಲಕ್ಕೆ ಬೀಳುವುದು, ಅಥವಾ ಬಿದ್ದ ಹಣ ಗಮನಕ್ಕೆ ಬಾರದೇ ಇರುವುದು ಅಪರೂಪ ತಾನೆ?

ಇಷ್ಟೆಲ್ಲಾ ಕಡಿಮೆ ಚಾನ್ಸ್‌ ಇದ್ದರೂ ನಿಮಗೆ ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕಿದೆ ಎಂದರೆ ಅದಕ್ಕೆ ಅರ್ಥ ಇದೆ. ಹಣ, ನಾಣ್ಯ ಕಂಡರೆ ಖಂಡಿತಾ ಎತ್ತಿ ಬ್ಯಾಗ್‌ಗೆ ಹಾಕಿಕೊಳ್ಳಿ. ನಿಮಗೇ ಯಾಕೆ ಹಣ ಸಿಕ್ಕಿದೆ ಎಂದು ಆಲೋಚಿಸಿ..

ಹಣ ಸಿಕ್ಕರೆ ಏನರ್ಥ?

ಈ ರೀತಿ ರಸ್ತೆಯಲ್ಲಿ ಹಣ ನಿಮಗೇ ಸಿಕ್ಕರೆ ಅದನ್ನು ನಿಮ್ಮ ಪೂರ್ವಜರ ಆಶೀರ್ವಾದ ಎಂದು ಪರಿಗಣಿಸಿ. ಅವರು ಇರುವ ಜಾಗದಿಂದ ನಿಮ್ಮನ್ನು ಹರಸುತ್ತಿದ್ದಾರೆ.

ರಸ್ತೆಯಲ್ಲಿ ಹಣ ಸಿಕ್ಕರೆ ಲಕ್ಷ್ಮಿ ನಿಮ್ಮನ್ನು ಆರಿಸಿದ್ದಾಳೆ ಎಂದರ್ಥ. ನೀವು ಶೀಘ್ರವೇ ನೂತನ ಕೆಲಸ ಆರಂಭಿಸಿ ಹಣ ಗಳಿಸುತ್ತೀರಿ. ನಿಮ್ಮ ಆರ್ಥಿಕ ಕಷ್ಟಗಳು ಕಡಿಮೆಯಾಗುತ್ತವೆ. ನಿಮ್ಮ ಬಳಿ ಲಕ್ಷ್ಮಿ ಸದಾ ನೆಲೆಸಲು ಬಂದಿದ್ದಾಳೆ ಎಂದು ಅರ್ಥವಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!