ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ಎರಡು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ತಂಡದ ಸ್ಥಿತಿ ಮಾತ್ರ ಬದಲಾಗಲಿಲ್ಲ. ಮೊದಲ ಪಂದ್ಯ ಗೆದ್ದ ನಂತರ ಸಿಎಸ್ಕೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.
ಕೆಕೆಆರ್ ವಿರುದ್ಧದ ಸೋಲಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಸಮಯದಲ್ಲಿ ನಾಯಕ ಎಂಎಸ್ ಧೋನಿ ನಿರಾಶೆಗೊಂಡಂತೆ ಕಂಡುಬಂದಿದ್ದಾರೆ. ಕೆಲವು ಪಂದ್ಯಗಳಲ್ಲಿ ತಂಡವು ತನ್ನ ಘನತೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ವಿಕೆಟ್‌ಗಳು ಬೇಗನೆ ಬಿದ್ದಾಗ, ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪವರ್ ಪ್ಲೇನಲ್ಲಿ ತಂಡವು ಕೇವಲ 31 ರನ್ ಗಳಿಸಲಷ್ಟೆ ಸಾಧ್ಯವಾಯಿತು ಎಂದು ಧೋನಿ ಹೇಳಿದ್ದಾರೆ.