ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟೆನಾಡು ಚಿತ್ರದುರ್ಗದಲ್ಲಿ ಬೇಸಿಗೆಯ ಬಿಸಿಲು ಜೋರಾಗಿದೆ. ಪರಿಣಾಮ ಬಯಲುಸೀಮೆಯ ಕುರುಚಲು ಕಾಡಿನಲ್ಲಿ ಹಸಿರು ಮರೆಯಾಗಿ ಕಪ್ಪುಗಟ್ಟುತ್ತಿದೆ. ಹೀಗಿರುವಾಗಲೇ ಅಲರ್ಟ್ ಆಗಿರುವ ಅರಣ್ಯ ಇಲಾಖೆ, ಚಿತ್ರದುರ್ಗದ ಊಟಿ ಎಂದೇ ಖ್ಯಾತಿಯಾಗಿರುವ ಜೋಗಿಮಟ್ಟಿ ವನ್ಯಧಾಮನಕ್ಕೆ ಮಳೆಗಾಲ ಆರಂಭವಾಗುವವರೆಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕೋಟೆನಾಡಿನ ಊಟಿ ಖ್ಯಾತಿಯ ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ವನ್ಯಧಾಮಕ್ಕೆ ಇದೀಗ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಏಕೆಂದರೆ ಕುರುಚಲು ಕಾಡು ಹೊಂದಿರುವ ವನ್ಯಧಾಮದಲ್ಲಿ ಬಿರು ಬೇಸಿಗೆಯ ಪರಿಣಾಮ ಗಿಡ, ಮರಗಳು ಒಣಗಿ ಕಪ್ಪುಗಟ್ಟುತ್ತಿದೆ. ಹೀಗಾಗಿ ಅಪ್ಪಿತಪ್ಪಿ ಯಾರಾದರೂ ಬೆಂಕಿ ಕಡ್ಡಿ ಗೀರಿದರೂ ಸಹ ಕಾಡು ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚಿದೆ. ಅಂತೆಯೇ ಬೇಸಿಗೆ ವೇಳೆ ಪ್ರಾಣಿ, ಪಕ್ಷಿಗಳ ರಕ್ಷಣೆ ದೃಷ್ಟಿಯಿಂದಲೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮತ್ತು ವಾಯು ವಿಹಾರಿಗಳಿಗೂ ನಿಷೇಧಿಸಲಾಗಿದೆ.