ದೇಹಕ್ಕೆ ವಿಟಮಿನ್ ಇ ಬಹಳ ಮುಖ್ಯ. ಇದು ಪ್ರಮುಖವಾದ ಪೋಷಕಾಂಶವಾಗಿದ್ದು, ದೇಹದ ಅನೇಕ ಕಾರ್ಯಗಳಿಗೆ ಅವಶ್ಯಕವಾಗಿದೆ. ವಿಟಮಿನ್ ಇ ಒಂದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.
ಇದು ದೇಹದಲ್ಲಿ ಉತ್ಪತ್ತಿಯಾಗುವ ಫ್ರೀ ರಾಡಿಕಲ್ಸ್ ಎಂಬ ಹಾನಿಕಾರಕ ಅಣುಗಳನ್ನು ತಟಸ್ಥಗೊಳಿಸುತ್ತದೆ. ಈ ಫ್ರೀ ರಾಡಿಕಲ್ಸ್‌ಗಳು ವಯಸ್ಸಾಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲೀನ ಕಾಯಿಲೆಗಳಿಗೆ ಕಾರಣವಾಗಬಹುದು.
ಇದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಕೆಲವು ಅಧ್ಯಯನಗಳ ಪ್ರಕಾರ, ವಿಟಮಿನ್ ಇ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಕೆಂಪು ರಕ್ತ ಕಣಗಳನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತು ರಕ್ತನಾಳಗಳನ್ನು ಹಿಗ್ಗಿಸುತ್ತದೆ, ಇದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
ವಿಟಮಿನ್ ಇ ಸಮೃದ್ಧವಾಗಿರುವ ಕೆಲವು ಆಹಾರಗಳು:
ಸೂರ್ಯಕಾಂತಿ ಎಣ್ಣೆ, ಸೋಯಾಬೀನ್ ಎಣ್ಣೆ, ಕಾರ್ನ್ ಎಣ್ಣೆ ಮತ್ತು ಆಲಿವ್ ಎಣ್ಣೆ. ಬಾದಾಮಿ, ಕಡಲೆಕಾಯಿ, ಹ್ಯಾಝಲ್‌ನಟ್ಸ್, ಸೂರ್ಯಕಾಂತಿ ಬೀಜಗಳು. ಪಾಲಕ್, ಬ್ರೊಕೊಲಿ. ಸಂಪೂರ್ಣ ಧಾನ್ಯಗಳು, ಬಲವರ್ಧಿತ ಉಪಹಾರ ಧಾನ್ಯಗಳು. ಕೆಂಪು ಬೆಲ್ ಪೆಪ್ಪರ್, ಆವಕಾಡೊ, ಮಾವಿನ ಹಣ್ಣು, ಕಿವಿ ಹಣ್ಣು ಸೇವಿಸುವುದು ಉತ್ತಮ.